ನ್ಯೂಸ್ ನಾಟೌಟ್ : ಖ್ಯಾತ ನಟ-ನಟಿಯರನ್ನು ಇನ್ನಿಲ್ಲದಂತೆ ಕಾಡುತ್ತಿರುವ deepfake ಉಪಟಳ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯಸ್ಥರಿಗೂ ತಟ್ಟಿದೆ.
ಆರ್ ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಅವರ ಡೀಪ್ ಫೇಕ್ ವಿಡಿಯೋ ಮೂಲಕ ದುಷ್ಕರ್ಮಿಗಳು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಉನ್ನತ ಮಟ್ಟದ ಮುಖ್ಯಸ್ಥರ ಹೆಸರಲ್ಲಿ ಡೀಪ್‌ಫೇಕ್ ವೀಡಿಯೊಗಳು ಹರಿದಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಆರ್ಥಿಕ ಸಲಹೆಯನ್ನು ನೀಡುವುದರ ಕುರಿತು ಆ ವಿಡಿಯೋ ಇದೆ ಎಂದು ಮಂಗಳವಾರ ಆರ್ ಬಿಐ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ, ಮತ್ತು ಎಚ್ಚರಿಕೆ ನೀಡಿದೆ.
‘ಕೆಲವು ಹೂಡಿಕೆ ಯೋಜನೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಗವರ್ನರ್ (ಶಕ್ತಿಕಾಂತ ದಾಸ್) ಅವರ ನಕಲಿ ವೀಡಿಯೊಗಳನ್ನು ಪ್ರಸಾರ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದೆ.
RBI cautions public on deepfake videos of Top Management circulated over social media giving financial advicehttps://t.co/bH5yittrIu
— ReserveBankOfIndia (@RBI) November 19, 2024
“ತಾಂತ್ರಿಕ ಸಾಧನಗಳ ಬಳಕೆಯ ಮೂಲಕ ಇಂತಹ ಯೋಜನೆಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಈ ಡೀಪ್ ಫೇಕ್ ವಿಡಿಯೊಗಳು ಜನರಿಗೆ ಸಲಹೆ ನೀಡಲು ಪ್ರಯತ್ನಿಸುತ್ತಿವೆ. ಆದರೆ ತನ್ನ ಅಧಿಕಾರಿಗಳು ಅಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಅಥವಾ ಬೆಂಬಲಿಸುವುದಿಲ್ಲ ಮತ್ತು ಈ ವಿಡಿಯೋಗಳು ನಕಲಿ” ಎಂದು ಸ್ಪಷ್ಟನೆ ನೀಡಿದೆ.