ಕ್ರೈಂವೈರಲ್ ನ್ಯೂಸ್ಸಿನಿಮಾ

ಸಲ್ಮಾನ್ ಖಾನ್ ಆಯ್ತು ಈಗ ಶಾರುಕ್ ಖಾನ್‌ ಗೂ ಜೀವ ಬೆದರಿಕೆ ಕರೆ..!50 ಲಕ್ಷ ರೂ. ಪಾವತಿಸುವಂತೆ ಬೇಡಿಕೆ..!

177

ನ್ಯೂಸ್ ನಾಟೌಟ್: ಬಾಲಿವುಡ್ ನಟ ಸಲ್ಮಾನ್ ಖಾನ್‌ ಬಳಿಕ ಇದೀಗ ನಟ ಶಾರುಕ್ ಖಾನ್‌ ಗೂ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ.

‘ಕರೆ ಮಾಡಿದ ವ್ಯಕ್ತಿ ₹50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಪಾವತಿಸದೇ ಹೋದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾನೆ’ ಎಂದು ಬಾಂದ್ರಾ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಅವರಿಚಿತ ವ್ಯಕ್ತಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 308(4), 351(3)(4) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಲ್ಮಾನ್ ಖಾನ್‌ ನನ್ನು ಕೊಲ್ಲುವುದಾಗಿ ಲಾರೆನ್ಸ್‌ ಬಿಷ್ಣೋಯಿ ಹಲವು ಬಾರಿ ಘೋಷಿಸಿಕೊಂಡಿದ್ದರು. ಇದೇ ಏಪ್ರಿಲ್‌ ನಲ್ಲಿ ಸಲ್ಮಾನ್‌ ಮನೆಯ ಹೊರಗಡೆ ಗುಂಡಿನ ದಾಳಿಯೂ ನಡೆದಿತ್ತು. ಇತ್ತೀಚೆಗೆ ಸಲ್ಮಾನ್ ಖಾನ್ ಆಪ್ತ, ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ನಡೆದಿದ್ದು, ಬಿಷ್ಣೋಯಿ ಗ್ಯಾಂಗ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ.

See also  ತಾಲಿಬಾನ್‌ ವಿದೇಶಾಂಗ ಸಚಿವರ ಜೊತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಮಾತುಕತೆ..! ಇತಿಹಾಸದಲ್ಲೇ ಮೊದಲ ಸಂಭಾಷಣೆ..!
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget