ಕರಾವಳಿಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಕಾಂತಾರ-1 ಚಿತ್ರದಲ್ಲಿ ಮತ್ತೆ ನಟಿಸುತ್ತಾರಾ ಸಪ್ತಮಿ ಗೌಡ..? ನಟಿ ಈ ಬಗ್ಗೆ ಹೇಳಿದ್ದೇನು?

240

ನ್ಯೂಸ್ ನಾಟೌಟ್ : ರಿಷಭ್‌ ಶೆಟ್ಟಿ ನಟನೆ, ನಿರ್ದೇಶನದ “ಕಾಂತಾರ – 2’’ ಚಿತ್ರ ಸೂಪರ್‌ ಹಿಟ್‌ ಆಗುವ ಮೂಲಕ ಆ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಕೆರಿಯರ್‌ಗೂ ಒಂದೊಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿತ್ತು. ಈಗ “ಕಾಂತಾರ-1′ ಪ್ರೀಕ್ವೆಲ್‌ನ ಮುಹೂರ್ತ ಆಗಿ, ಭರ್ಜರಿ ತಯಾರಿಯಲ್ಲಿದೆ.

“ಕಾಂತಾರ’ ಚಿತ್ರದ ಲೀಲಾ ಪಾತ್ರದ ಮೂಲಕ ಗಮನ ಸೆಳೆದ ಸಪ್ತಮಿ ಗೌಡ “ಕಾಂತಾರ-1’ನಲ್ಲಿ ಇರುತ್ತಾರಾ ಎಂಬ ಕುತೂಹಲ ಅನೇಕರಿಗಿತ್ತು. ಈಗ ಆ ಕುತೂಹಲಕ್ಕೆ ಸ್ವತಃ ಸಪ್ತಮಿ ಉತ್ತರಿಸಿದ್ದಾರೆ. “ಕಾಂತಾರ-1’ನಲ್ಲಿ ನಾನು ನಟಿಸುತ್ತಿಲ್ಲ. ಅದು ಪ್ರೀಕ್ವೆಲ್‌ ಆದ್ದರಿಂದ ಅಲ್ಲಿ ನನ್ನ ಪಾತ್ರವೇ ಬರುವುದಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಆ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಇವತ್ತಿಗೂ ಜನ ಆ ಸಿನಿಮಾ ಬಗ್ಗೆ ಮಾತನಾಡುತ್ತಾರೆ. ನನಗೆ ಏನೇ ಸಿಕ್ಕಿದರೂ ಅದು ಆ ಸಿನಿಮಾದಿಂದ ಎನ್ನಲು ಸಪ್ತಮಿ ಮರೆಯುವುದಿಲ್ಲ. ಸದ್ಯ ಸಪ್ತಮಿ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಆ ಚಿತ್ರದ ಪಾತ್ರಕ್ಕಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

See also  ಮೋದಿಗೆ 'ಚೊಂಬು' ತೋರಿಸಲು ಬಂದ ನಲಪಾಡ್ ಗೆ ಕಂಬಿ ತೋರಿಸಿದ ಪೊಲೀಸರು..! ಅರ್ಧಗಂಟೆ ಮುಂಚೆಯೇ ನಂಬರ್‌ ಇಲ್ಲದ ಕಾರಿನಲ್ಲಿ ಕಾದು ಕುಳಿತಿದ್ದ ನಲಪಾಡ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget