ಕರಾವಳಿರಾಜಕೀಯರಾಜ್ಯಸುಳ್ಯ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯ ಸದಸ್ಯರಾಗಿ ಕೆ.ಪಿ. ಜಾನಿ ಮರುನೇಮಕ, ಸಂಪಾಜೆಗೆ ಸಂದ ಗೌರವ

230

ನ್ಯೂಸ್ ನಾಟೌಟ್: ಕಾರ್ಮಿಕ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಪ್ರಚಾರ ಸಮಿತಿ ಸಂಯೋಜಕ ಕೆ.ಪಿ. ಜಾನಿ ಸಂಪಾಜೆ ಇವರನ್ನು ಕರ್ನಾಟಕ ಸರ್ಕಾರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಸದಸ್ಯರಾಗಿ ಮರುನೇಮಕಗೊಳಿಸಲಾಗಿದೆ.

ಈ ಹಿಂದೆ ಜಾನಿ ಅವರನ್ನು ಸರ್ಕಾರ ಆಯ್ಕೆ ಮಾಡಿತ್ತು. ಆದರೆ ಕೆಲವರು ಒಳಗಿನಿಂದ ಅವರ ವಿರುದ್ಧ ಕೆಲಸ ಮಾಡಿದ ಕಾರಣ ಜಾನಿ ಆದೇಶವನ್ನು ಸರ್ಕಾರ ರದ್ದುಗೊಳಿಸಿತ್ತು. ಇದಾದ ಬೆನ್ನಲ್ಲೇ ಜಾನಿ ಮತ್ತು ಅವರ ಆಪ್ತ ವಲಯ ಸಿಎಂ ಸಿದ್ದರಾಮಯ್ಯ ಹಾಗೂ ಜನರಲ್ ಸೆಕ್ರೆಟರಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ವಸ್ತು ಸ್ಥಿತಿಯನ್ನು ವಿವರಿಸಿದರು. ಇದೀಗ ಕೆ.ಪಿ ಜಾನಿ ಅವರನ್ನು ಕಾರ್ಮಿಕ ಮಂಡಳಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 7ರಂದು ಬೆಂಗಳೂರಿನ ಕಚೇರಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ಜಾನಿ ಭಾಗಿಯಾದರು.

See also  ಕೋಟಿಗಟ್ಟಲೆ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬೆಂಬಲಕ್ಕೆ ನಿಂತರಾ ಕೇಂದ್ರ ಸಚಿವೆ? ಶೋಭಾ ಕರಂದ್ಲಾಜೆ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget