ಕ್ರೀಡೆ/ಸಿನಿಮಾಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿ 5 ಕೋಟಿ ರೂ. ಬೇಡಿಕೆ ಇಟ್ಟ ಆರೋಪಿ ಕರ್ನಾಟಕದಲ್ಲಿ ಪತ್ತೆ..! ಖಾನ್ ಬೆದರಿಕೆ ಪ್ರಕರಣಕ್ಕೆ ಹೊಸ ತಿರುವು..!

212

ನ್ಯೂಸ್ ನಾಟೌಟ್: ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡ ವ್ಯಕ್ತಿಯಿಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಬೆದರಿಕೆ ಕರೆ ಮತ್ತು 5 ಕೋಟಿ ರೂಪಾಯಿ ನೀಡುವಂತೆ ಒತ್ತಡ ಬಂದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಕರ್ನಾಟಕದ ಹುಬ್ಬಳ್ಳಿಯಲ್ಲಿ ಶಂಕಿತ ಆರೋಪಿಯ ಜಾಡು ಪತ್ತೆಯಾಗಿದೆ.

ತಕ್ಷಣಕ್ಕೆ ಆತನನ್ನು ಬಂಧಿಸಿಲ್ಲವಾದರೂ, ಪೊಲೀಸ್ ತಂಡ ಹುಬ್ಬಳ್ಳಿಗೆ ತಲುಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
1998ರ ಕೃಷ್ಣಮೃಗ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಬೇಕು ಎಂಬ ವಾಟ್ಸಪ್ ಸಂದೇಶ ಸಲ್ಮಾನ್ ಖಾನ್ ಗೆ ಬಂದಿತ್ತು. ವರ್ಲಿಯಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕಚೇರಿಯ ವಾಟ್ಸಪ್ ಸಹಾಯವಾಣಿಗೆ ಸೋಮವಾರ(ನ.4) ಮಧ್ಯರಾತ್ರಿ ಈ ಸಂದೇಶ ಬಂದಿತ್ತು. ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.

“ಸಲ್ಮಾನ್ ಖಾನ್ ಜೀವಂತವಾಗಿ ಇರಲು ಬಯಸುವುದಾದರೆ, ನಮ್ಮ (ಬಿಷ್ಣೋಯಿ ಸಮುದಾಯ) ದೇವಾಲಯಕ್ಕೆ ತೆರಳಿ ಕ್ಷಮೆ ಯಾಚಿಸಬೇಕು ಇಲ್ಲವೇ ಐದು ಕೋಟಿ ರೂಪಾಯಿಗಳನ್ನು ಪಾವತಿಸಬೇಕು. ಅವರು ಹಾಗೆ ಮಾಡದಿದ್ದಲ್ಲಿ, ನಾವು ಅವರನ್ನು ಹತ್ಯೆ ಮಾಡುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಜೀವಂತವಾಗಿದೆ” ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ, ಸಲ್ಮಾನ್ ಖಾನ್ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

Click

https://newsnotout.com/2024/11/sowthadka-mahaganapathi-temple-kannada-news-viral-news/
See also  ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕತ್ತಿಗೆ ಸಿಲುಕಿ ಬಾಲಕಿ ದಾರುಣ ಸಾವು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget