ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಮಾಡಿದ್ದವ ರುವಾಂಡಾ ದೇಶದಲ್ಲಿ ಅರೆಸ್ಟ್..! ಭಾರತಕ್ಕೆ ಹಸ್ತಾಂತರ

ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಮತ್ತು ಸ್ಫೋಟಕ ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರುವಾಂಡಾ ದೇಶದಲ್ಲಿ(Rwanda) ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ಬಾದ ಸದಸ್ಯನಾಗಿದ್ದ ಸಲ್ಮಾನ್ ರೆಹಮಾನ್ ಖಾನ್ ಅನ್ನು ಬಂಧಿಸಿರುವುದಾಗಿ ಸಿಬಿಐ ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಜೊತೆಗೆ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.

ಸಿಬಿಐನ ಜಾಗತಿಕ ಕಾರ್ಯಾಚರಣೆ ಘಟಕ ಮತ್ತು ಎನ್ಐಎ ಸಂಘಟಿತ ಪ್ರಯತ್ನದಿಂದ ಆರೋಪಿಯನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಒದಗಿಸಿದ್ದ. ಸ್ಫೋಟಕಗಳನ್ನು ಕ್ರೋಢೀಕರಿಸುವ ಕೆಲಸದಲ್ಲಿ ಸಲ್ಮಾನ್ ರೆಹಮಾನ್ ಖಾನ್ ನಿರತನಾಗಿದ್ದ.

ಸಲ್ಮಾನ್ ರೆಹಮಾನ್ ಖಾನ್ 2018ರಿಂದ 2022ರವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಆತನಿಗೆ ಭಯೋತ್ಪಾದಕ ಪ್ರಕರಣಗಳ ಆರೋಪಿ ಟಿ.ನಾಸೀರ್ ಪರಿಚಯವಾಗಿತ್ತು. ಜೈಲಿನಲ್ಲಿ ಸಲ್ಮಾನ್ ರೆಹಮಾನ್ ಖಾನ್ ಸೇರಿದಂತೆ ಕೆಲ ಸಹ ಕೈದಿಗಳನ್ನ ಬ್ರೈನ್ ವಾಶ್ ಮಾಡಿದ್ದ ನಾಸೀರ್​, ರೆಹಮಾನ್ ​​ನನ್ನು ಭಯೋತ್ಪಾದನೆಯೆಡೆಗೆ ಮತ್ತಷ್ಟು ಸೆಳೆದಿದ್ದ. ಬಳಿಕ ವಿದೇಶಕ್ಕೆ ಹಾರಿ ಆಫ್ರಿಕಾದ ರುವಾಂಡಾ ಎಂಬ ದೇಶದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.

Click

https://newsnotout.com/2024/11/jail-kannada-news-viral-video-up-police-praising/
https://newsnotout.com/2024/11/jail-kannada-news-viral-video-up-police-praising/
https://newsnotout.com/2024/11/big-boss-contestent-deepika-das-issue-mother-complaints/
https://newsnotout.com/2024/11/big-boss-contestent-deepika-das-issue-mother-complaints/
https://newsnotout.com/2024/11/belthangady-puc-girl-nomore-viral-news-marriage-issue-d/
https://newsnotout.com/2024/11/ksrtc-kananda-news-60-students-7-teachers-viral-news-f/
https://newsnotout.com/2024/11/samsath-kannada-news-rahul-priyanka-sonia-oath-taking-viral-news/
https://newsnotout.com/2024/11/centrle-jail-viral-news-police-anita-cctv-issue/

Related posts

ಗೂನಡ್ಕ: ಬೆತ್ತಲೆಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೆಲ್ಲಾ ಓಡಾಡಿದ ಯುವಕ..! ಗಾಬರಿಯಾದ ಜನ..!

58 ಲಕ್ಷ ರೂ. ಸಂಬಳವಿದ್ದರೂ ಗರ್ಲ್‌ಫ್ರೆಂಡ್‌ ಇಲ್ಲವೆಂದು ಬೇಸರ..! ಬೆಂಗಳೂರಿಗನ ಟ್ವೀಟ್ ಎಲ್ಲೆಡೆ ವೈರಲ್!

ಇನ್‍ ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ನೇಣಿಗೆ ಶರಣಾದ ಯುವಕ..! 5 ವರ್ಷಗಳ ಪ್ರೀತಿ ಮರೆತ ಆಕೆ ಮಾಡಿದ್ದೇನು..?