Latestಕ್ರೈಂರಾಜ್ಯವಿಡಿಯೋವೈರಲ್ ನ್ಯೂಸ್

ಚಾಲಕನಿಲ್ಲದಾಗ ಮಕ್ಕಳಿದ್ದ ರಿಕ್ಷಾವನ್ನು ನ್ಯೂಟ್ರಲ್ ಮಾಡಿ ಹಿಂದೆ ತಳ್ಳಿದ ಯುವಕ..! ಪವಾಡವೆಂಬಂತೆ ಪಾರಾದ ಮಕ್ಕಳು..!

774

ನ್ಯೂಸ್ ನಾಟೌಟ್: ಹಾಸನ ಜಿಲ್ಲೆಯಲ್ಲಿ ಯುವಕನೋರ್ವ ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿದ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದ ನೆಹರು ನಗರದಲ್ಲಿ ನಡೆದಿದೆ.

ಕೂಡಲೇ ಓಡಿ ಬಂದ ಚಾಲಕ ಆಟೋವನ್ನು ಹಿಡಿದು ನಿಲ್ಲಿಸಿದ್ದು, ದುರ್ಘಟನೆ ತಪ್ಪಿದೆ. ಶುಕ್ರವಾರ(ಜೂ.8) ಬೆಳಗ್ಗೆ ಅಂಗಡಿಯಲ್ಲಿ ದಿನಸಿ ಖರೀದಿಸಲು ಚಾಲಕ ಆಟೋವನ್ನು ರಸ್ತೆ ಬದಿ ನಿಲ್ಲಿಸಿ ತೆರಳಿದ್ದರು. ಆಟೋದಲ್ಲಿ ಮಕ್ಕಳಿದ್ದರು. ರಸ್ತೆ ಬದಿಯ ಪಾರ್ಕಿಂಗ್ ಸ್ಥಳದಲ್ಲಿ ಯುವಕ ಬೈಕ್ ನಿಲ್ಲಿಸಿದ್ದನು. ಬೈಕ್​ ಹಿಂದೆ ಆಟೋ ಪಾರ್ಕ್​ ಮಾಡಲಾಗಿತ್ತು.

ಇದರಿಂದ ಬೈಕ್ ತೆಗೆಯಲಾಗದೆ ಯುವಕ ಪರದಾಡಿದ್ದಾನೆ. ಆಗ, ಸಿಟ್ಟಿನಿಂದ ಯುವಕ ಆಟೋ ಬಳಿ ಹೋಗಿ ಮಕ್ಕಳನ್ನು ನೋಡಿಯೂ ನ್ಯೂಟ್ರಲ್​ ಮಾಡಿ ರಿಕ್ಷಾವನ್ನು ಹಿಂದೆ ತಳ್ಳಿದ್ದಾನೆ. ಆಟೋ ವೇಗವಾಗಿ ಹಿಂದೆ ಚಲಿಸುವುದನ್ನು ಕಂಡು ಸ್ಥಳದಲ್ಲಿದ್ದವರು ಗಾಬರಿಯಲ್ಲಿ ಕೂಗಾಡಿದ್ದಾರೆ.

ಕೂಡಲೆ ಸ್ಥಳಕ್ಕೆ ಬಂದ ಚಾಲಕ ಆಟೋ ನಿಲ್ಲಿಸಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೀಡಿಯೋ ಪರಿಶೀಲನೆ ನಡೆಸಿದ ಪೊಲೀಸರು ಯುವಕನನ್ನು ಕರೆಸಿ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ. ವಾಹನ ಸವಾರರು ವಾಹನ ಪಾರ್ಕಿಂಗ್ ವೇಳೆ ನಿಯಮ ಪಾಲನೆ ಮಾಡುವಂತೆಯೂ ಎಚ್ಚರಿಸಿದ್ದಾರೆ.

ತುರ್ತು ಆಂಗಾಂಗಗಳನ್ನು ರವಾನೆ ಮಾಡುವ ಮೂಲಕ 5 ಜನರ ಜೀವ ಉಳಿಸಿ ಭಾರತೀಯ ವಾಯುಸೇನೆ..! ಬೆಂಗಳೂರಿನಿಂದ ದೆಹಲಿಗೆ..!

ತಿರುಪತಿ ಲಡ್ಡು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಆನ್ ಲೈನ್ ಸಂಸ್ಥೆಗಳಿಗೆ ನೋಟಿಸ್..! ಈ ಬಗ್ಗೆ ಟಿಟಿಡಿ ಹೇಳಿದ್ದೇನು..?

See also  ಬಂಟ್ವಾಳದಲ್ಲಿ ಬಾಲಕಿಯ ಮೇಲೆ ಗ್ಯಾಂಗ್ ರೇಪ್‌
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget