ಕರಾವಳಿಕ್ರೈಂಮಂಗಳೂರು

ಕೊಡೆ ಬಿಡಿಸಿದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಜೂನಿಯರ್ ಕಾಲೇಜಿನ ಉಪನ್ಯಾಸಕಿ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು

233

ನ್ಯೂಸ್ ನಾಟೌಟ್: ಸಂಬಂಧಿಕರ ಮನೆಗೆಂದು ಬೈಕ್ ನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಜೂನಿಯರ್ ಕಾಲೇಜಿನ ಉಪನ್ಯಾಸಕಿಯೊಬ್ಬರು ಬೈಕ್ ನಿಂದ ಕೆಳಕ್ಕೆ ಬಿದ್ದು ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟದ ಬಳಿಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತರನ್ನು ಮಾಡಾವು ಜೂನಿಯರ್ ಕಾಲೇಜಿನ ಅತಿಥಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿ ಎಂದು ತಿಳಿದು ಬಂದಿದೆ.

ಸುನಂದ ಅವರ ಪತಿ ಡಾ. ಅಚ್ಚುತ ಪೂಜಾರಿ ಸುಳ್ಯದ ಬೀರಮಂಗಲದ ನಿವಾಸಿಯಾಗಿದ್ದಾರೆ. ಸದ್ಯ ಡಾ. ಅಚ್ಚುತ ಪೂಜಾರಿ ಬಂಟ್ವಾಳದ ಕಾಮಾಜೆ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಕಳೆದ ಶುಕ್ರವಾರ ಈಶ್ವರಮಂಗಲದ ಮೇನಾಲಕ್ಕೆ ನಿಕಟ ಸಂಬಂಧಿಕರ ಬೈಕ್ ನಲ್ಲಿ ಸುನಂದ ಅವರು ತೆರಳುತ್ತಿದ್ದರು. ಈ ವೇಳೆ ಮಳೆ ಬಂದಿದೆ. ತಕ್ಷಣ ಅವರು ಕೈಯಲ್ಲಿದ್ದ ಕೊಡೆಯನ್ನು ಬಿಡಿಸಿದ್ದಾರೆ. ಈ ವೇಳೆ ಗಾಳಿಯ ರಭಸಕ್ಕೆ ಹಿಂದಕ್ಕೆ ಎಳೆಯಲ್ಪಟ್ಟಿದ್ದಾರೆ. ರಸ್ತೆಗೆ ಬಿದ್ದಿದ್ದಾರೆ. ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

Click

https://newsnotout.com/2024/09/kannada-news-school-girl-arrest-police-rajashekar-arrested/
https://newsnotout.com/2024/09/masjid-kannada-news-darga-of-muslim-and-ganesha-chaturti-issue/
https://newsnotout.com/2024/09/ganesha-chathurti-conflict-kannada-news-46-are-arrested-kannada-news-d/
https://newsnotout.com/2024/09/kannada-news-ayyappa-temple-onam-celebration-kannada-news/
See also  ವಿದ್ಯಾರ್ಥಿಯ ಬದುಕು ಮುಗಿಸಿದ ಮೊಬೈಲ್‌ ಚಾರ್ಜರ್‌ ..! ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾತನ ದುರಂತ ಅಂತ್ಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget