ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹಬ್ಬದ ದಿನ ಗಂಡ ಲೇಟಾಗಿ ಮನೆಗೆ ಬಂದನೆಂದು ರೈಲಿಗೆ ತಲೆಕೊಟ್ಟ ಪತ್ನಿ..! ಪತ್ನಿ ಸತ್ತಳೆಂದು ಗಂಡನೂ ನೇಣಿಗೆ ಶರಣು..!

ನ್ಯೂಸ್ ನಾಟೌಟ್ : ರಾಜಸ್ಥಾನಿಗಳ ಪ್ರಮುಖ ಹಬ್ಬ ಕರ್ವಾ ಚೌತ್‌ ಹಬ್ಬದ ದಿನ ಗಂಡ ತಡವಾಗಿ ಮನೆಗೆ ಬಂದ ಎಂದು ಗಂಡನ ಜೊತೆಗೆ ಜಗಳವಾಡಿದ ಪತ್ನಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಅಕ್ಟೋಬರ್ 20ರಂದು ಜೈಪುರದ ಹರ್ಮಾಡಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡವಳನ್ನು ಮೋನಿಕಾ (35) ಎಂದು ಗುರುತಿಸಲಾಗಿದೆ.‌
ಕರ್ವಾ ಚೌತ್ ಹಬ್ಬದಂದು ಪತಿ ಘನಶ್ಯಾಮ್ ಬಂಕರ್ (38) ತಡವಾಗಿ ಮನೆಗೆ ಬಂದಿದ್ದರಂತೆ. ಇದರಿಂದ ಕೋಪಿಸಿಕೊಂಡ ಮೋನಿಕಾ ಗಂಡನ ಜೊತೆಗೆ ಜಗಳ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳದ ನಂತರ ಮೋನಿಕಾಳ ಮನವೊಲಿಸಲು ಘನಶ್ಯಾಮ್ ಪ್ರಯತ್ನಿಸಿದ್ದಾನೆ.

ಆದರೆ ಮೋನಿಕಾ ಮನೆಯಿಂದ ಹೊರಬಂದು ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ನಿಯ ಸಾವಿನಿಂದ ಮನನೊಂದ ಘನಶ್ಯಾಮ್ ಮನೆಗೆ ಮರಳಿದ್ದು, ಆಕೆಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ಘನಶ್ಯಾಮ್ ತನ್ನ ಅಣ್ಣನಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾನೆ. ಅದರಲ್ಲಿ ʼಸಹೋದರ.. ನಾನು ಸೋತಿದ್ದೇನೆ.. ಕ್ಷಮಿಸಿ… ಗಣಪತ್ ಜಿ ಮತ್ತು ಘನಶ್ಯಾಮ್ ಕಾಂಡೆಲ್ ಅವರೊಂದಿಗೆ ಮಾತನಾಡಿ, ಅವರು ನಿಮಗೆ ಸಹಾಯ ಮಾಡುತ್ತಾರೆ. ಈಗ ನೀವು ನನ್ನ ಐಡಿಯಲ್ಲಿ ಕೆಲಸ ಮಾಡಬೇಕು.. ನನ್ನ ಪತ್ನಿ ರೈಲಿನ ಮುಂದೆ ಹಾರಿ ಸಾವನ್ನಪ್ಪಿದ್ದಾಳೆʼ ಎಂದು ಸಂದೇಶ ಕಳುಹಿಸಿದ್ದಾರೆ.

Click

https://newsnotout.com/2024/10/bsnl-new-logo-kannada-news-introduced-network-kannada-news/
https://newsnotout.com/2024/10/byelection-kannada-news-congress-opration-viral-news/
https://newsnotout.com/2024/10/mangaluru-kannada-news-surathkal-kannada-news/
https://newsnotout.com/2024/10/mangaluru-kannada-news-helmet-kannada-news-mangaluru/

Related posts

ಮಂಗಳೂರು: ಹತ್ಯೆಯಾದ ಫಾಜೀಲ್, ಜಲೀಲ್, ಮಸೂದ್ ಕುಟುಂಬಕ್ಕೆ ಶೀಘ್ರ ಪರಿಹಾರ! ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ

ಬಂಡುಕೋರರ ವಶವಾದ ಸಿರಿಯಾ, ಅಧ್ಯಕ್ಷ ರಷ್ಯಾಕ್ಕೆ ಪಲಾಯನ..! ಸಿರಿಯಾದಲ್ಲಿರುವ ಭಾರತೀಯರು ಸ್ವದೇಶಕ್ಕೆ ವಾಪಾಸ್ಸಾಗುವಂತೆ ಸೂಚನೆ..!

ಆ ಕಟ್ಟಡದಿಂದ ಈ ಕಟ್ಟಡಕ್ಕೆ ಏನಿದು ಹಾಸ್ಟೆಲ್ ಹುಡುಗರ ರಾಕೆಟ್ ವಾರ್? ಉಳಿದ ನಿವಾಸಿಗಳಿಗೆ ಫುಲ್ ಶಾಕ್! ಇಲ್ಲಿದೆ ವೈರಲ್ ವಿಡಿಯೋ