ಕ್ರೈಂವೈರಲ್ ನ್ಯೂಸ್

ಕಾಲಿಗೆ ಸರಪಳಿ ಹಾಕಿ ಕಾರ್ಮಿಕನನ್ನು ಜೀತಕ್ಕಿಟ್ಟದ್ಯಾರು..? ಏನಿದು ಅಮಾನವೀಯ ಘಟನೆ? ಪೊಲೀಸರು ಆತನನ್ನು ರಕ್ಷಿಸಿದ್ದೇಗೆ?

239

ನ್ಯೂಸ್ ನಾಟೌಟ್: ಕಂಪನಿಯ ಮಾಲೀಕನೊಬ್ಬ ಕಾರ್ಮಿಕ ಮುಂಗಡವಾಗಿ ಹಣ ಪಡೆದಿದ್ದಕ್ಕೆ ಆತನ ಕಾಲಿಗೆ ಸರಪಳಿ ಹಾಕಿ ಜೀತಕ್ಕೆ ನೇಮಿಸಿಕೊಂಡ ಅಮಾನವೀಯ ಘಟನೆ ರಾಮನಗರದ(Ramanagara) ಮೆಹಬೂಬ್ ನಗರದ ಸಿಲ್ಕ್ ಫ್ಯಾಕ್ಟರಿಯಲ್ಲಿ ನಡೆದಿದೆ.

ಕಾಲಿಗೆ ಸರಪಳಿ ಹಾಕಿಸಿಕೊಂಡು ಕಾರ್ಖಾನೆಯಲ್ಲಿ ಜೀತಕ್ಕೆ ಸಿಲುಕಿದ್ದ ಕಾರ್ಮಿಕನನ್ನು ವಸೀಂ (24) ಎಂದು ಗುರುತಿಸಲಾಗಿದೆ.

ಆತ ಕಾರ್ಖಾನೆಯ ಮಾಲೀಕನ ಬಳಿ 1.50 ಲಕ್ಷ ರೂ. ಮುಂಗಡವಾಗಿ ಸಾಲ ಪಡೆದಿದ್ದ. ಇದಾದ ಬಳಿಕ ಅನಿವಾರ್ಯ ಕಾರಣದಿಂದ ಒಂದು ತಿಂಗಳು ಕೆಲಸಕ್ಕೆ ಹೋಗಿರಲಿಲ್ಲ. ಇದೇ ಕಾರಣಕ್ಕೆ ಮಾಲೀಕ ಆತನನ್ನು ಬಂಧಿಸಿ ಜೀತಕ್ಕೆ ನೇಮಿಸಿಕೊಂಡಿದ್ದ ಎಂದು ವರದಿ ತಿಳಿಸಿದೆ.

ಈ ಸಂಬಂಧ ಕಾರ್ಖಾನೆಯ ಮಾಲೀಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಜದ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾರ್ಮಿಕನ ಕಾಲಿಗೆ 9 ದಿನಗಳಿಂದ ಸರಪಳಿ ಹಾಕಲಾಗಿದ್ದು, ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಈ ವಿಚಾರ ತಿಳಿದ ರಾಮನಗರ ಟೌನ್ ಪೊಲೀಸರು (Police) ಸ್ಥಳಕ್ಕೆ ತೆರಳಿ ಆತನನ್ನು ರಕ್ಷಿಸಿದ್ದಾರೆ. ವಸೀಂ ಐದು ತಿಂಗಳ ಹಿಂದೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

See also  ಮಂಗಳೂರು: ಬಾಲಕಿಯರ ಹಾಸ್ಟೆಲ್ ನಿಂದ ಮೊಬೈಲ್ ಕದ್ದವನಿಗೆ 3 ವರ್ಷ ಜೈಲು, ಎಷ್ಟು ರೂಪಾಯಿ ದಂಡ ಗೊತ್ತಾ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget