ಕ್ರೈಂವೈರಲ್ ನ್ಯೂಸ್

‘ಅಪ್ಪ ಹೊಡೆಯುತ್ತಾನೆ’ ಪೊಲೀಸರಿಗೆ ಕರೆ ಮಾಡಿದ 7 ವರ್ಷದ ಮಗು! ಇದಕ್ಕೆ ಪೊಲೀಸ್ ಅಧಿಕಾರಿ ಹೇಳಿದ್ದೇನು?

ನ್ಯೂಸ್ ನಾಟೌಟ್: ಶಾಲೆಯನ್ನು ತಪ್ಪಿಸಿಕೊಳ್ಳಲು ಮಕ್ಕಳು ಹಲವು ನೆಪಗಳನ್ನು ಹೇಳುವುದು ನಿಜ. ಚೀನಾದ 7 ವರ್ಷದ ಬಾಲಕ ಶಾಲೆ ತಪ್ಪಿಸಲು ಹೊಸ ಉಪಾಯ ಕಂಡುಕೊಂಡಿದ್ದ. ಪೊಲೀಸರಿಗೆ ಕರೆ ಮಾಡಿ ತನ್ನ ತಂದೆ ತನ್ನನ್ನು ಹೊಡೆಯುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ ಪ್ರಕರಣ ವರದಿಯಾಗಿದೆ.

ಚೀನಾದ ಝೆಜಿಯಾಂಗ್ ಪ್ರಾಂತ್ಯದ ಲಿಶುಯಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರೊಂದಿಗೆ ಮಗು ನಡೆಸಿದ ಸಂಭಾಷಣೆಯ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೋಮ್​ವರ್ಕ್​ ಮಾಡದ ಬಾಲಕ ಭಯದಿಂದ ಶಾಲೆ ತಪ್ಪಿಸುವ ಉಪಾಯ ಹೂಡಿದ್ದಾನೆ.

ಅದಕ್ಕಾಗಿ ತನ್ನ ತಂದೆ ತನ್ನನ್ನು ಹೊಡೆಯುತ್ತಿದ್ದಾರೆ ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಮಾಡಿದ್ದಾರೆ.

ವಿಡಿಯೋದಲ್ಲಿ ಪೊಲೀಸ್​, ನೀವು ಪೊಲೀಸರಿಗೆ ಫೋನ್ ಮಾಡಿದ್ದೀರೆ? ನಿಮ್ಮನ್ನು ಹೊಡೆದವರು ಯಾರು? ಎಂದು ಕೇಳಿದ್ದಾರೆ. ನನ್ನ ತಂದೆ ಎಂದು ಮಗು ಉತ್ತರಿಸಿದೆ. ಹೇಗೆ ಹೊಡೆದರು ಎಂದು ಕೇಳಿದಾಗ ಮೆಲ್ಲಗೆ ಹೊಡೆದರು ಎಂದಿದ್ದಾನೆ. ಆದರೆ ತುಂಬಾ ಜೋರಾಗಿ ಏನಲ್ಲ ಎಂದು ಹೇಳಿದಾಗ ಪೊಲೀಸರಿಗೆ ಅನುಮಾನ ಬಂದಿದೆ. ಆನಂತರ ಮಗುವನ್ನು ಶಿಕ್ಷಿಸುವ ಬದಲು ಪೊಲೀಸ್ ಅದಕ್ಕೆ ಸಹಾಯ ಮಾಡಿದ್ದಾರೆ ಮತ್ತು ಪೋಷಕರಿಗೆ ಮಾಹಿತಿ ನೀಡಿ ಬುದ್ದಿ ಹೇಳಿದ್ದಾರೆ.

ಈ ವಿಡಿಯೋದಲ್ಲಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿದ್ದಕ್ಕಾಗಿ ಕೆಲವರು ಅಧಿಕಾರಿಯನ್ನು ಶ್ಲಾಘಿಸಿದ್ದಾರೆ. ಮಕ್ಕಳು ಸುಳ್ಳು ಹೇಳದಿರುವಂತೆ ಪೋಷಕರು ಶಿಕ್ಷಕರು ತಿಳಿವಳಿಕೆ ನೀಡಬೇಕು ಎಂದಿದ್ದಾರೆ.

https://www.youtube.com/watch?v=mtKTEHG9O4I

Related posts

ಕೋರ್ಟ್ ಗೆ ಕರೆದೊಯ್ಯುವಾಗ ಪೊಲೀಸರೇ ಕಳ್ಳರನ್ನು ಬಿಟ್ಟರಾ..?11 ಪೊಲೀಸರು ಅಮಾನತ್ತಾದ ರೋಚಕ ಸ್ಟೋರಿ ಇಲ್ಲಿದೆ, ವಿಡಿಯೋ ನೋಡಿ

ಕಾಲಭೈರವನ ಪ್ರತಿಮೆಯ ಬಾಯಿಗೆ ಸಿಗರೇಟ್ ಇಟ್ಟು ವಿಡಿಯೋ ಮಾಡಿದ ಯುವಕ..! ತನಿಖೆ ಆರಂಭಿಸಿದ ಪೊಲೀಸರು

ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ ಸೋನು ಗೌಡ..! ಕಾರು ಅಪಘಾತದಲ್ಲಿ ಆಸ್ಪತ್ರೆಗೆ ದಾಖಲು