ನ್ಯೂಸ್ ನಾಟೌಟ್: ಪತಿ ಪತ್ನಿಯನ್ನು ಕೊಲೆ ಮಾಡಿ ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ. ಆತ ಇಟ್ಟಿಗೆಯಿಂದ ಪತ್ನಿಯ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದ. ನಂತರ ಕೊಡಲಿಯಿಂದ ತಲೆ ಕಡಿದು ದೇಹವನ್ನು ಮನೆಯಲ್ಲಿಯೇ ಹೂತುಹಾಕಿದ್ದ ಎನ್ನಲಾಗಿದೆ.
ಕುಟುಂಬದ ದೂರಿನ ಮೇರೆಗೆ ಪೊಲೀಸರು ಕಠಿಣ ಕ್ರಮ ಕೈಗೊಂಡ ನಂತರ, ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಲಾದ ವಸ್ತುಗಳು, ಮಹಿಳೆಯ ತಲೆಯನ್ನು ನದಿಯಿಂದ ಮತ್ತು ಮನೆಯಲ್ಲಿ ಹೂತಿಟ್ಟಿದ್ದ ಮುಂಡವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಗಾರ ಪತಿಯನ್ನು ಜೈಲಿಗೆ ಕಳುಹಿಸಲಾಗಿದೆ.
ಮೊರಾದಾಬಾದ್ ನ ಮಜೋಲಾ ಪೊಲೀಸ್ ಠಾಣೆಯ ಟಿಪಿ ನಗರದಲ್ಲಿ ನಡೆದಿದೆ.ವ್ಯಕ್ತಿ ಶೇನ್ ಆಲಂ ಅಲಿಯಾಸ್ ರೆಹಾನ್ ಮೊದಲು ತನ್ನ ಪತ್ನಿ ತಬಸ್ಸುಮ್ ಳನ್ನು ಇರಿದು, ನಂತರ ಇಟ್ಟಿಗೆಯಿಂದ ಜಜ್ಜಿ ಕೊಂದಿದ್ದಾನೆ. ಶೇನ್ ಆಲಂ ತನ್ನ ಪತ್ನಿ ತಬಸ್ಸುಮ್ ಅವರ ಶಿರಚ್ಛೇದ ಮಾಡಿ ನದಿಗೆ ಎಸೆದಿದ್ದಾನೆ. ಯಾರಿಗೂ ಏನೂ ತಿಳಿಯದಂತೆ ಶೇನ್ ಮನೆಯೊಳಗೆ ಗುಂಡಿ ತೋಡಿ ತಬಸ್ಸಮ್ ನ ದೇಹವನ್ನು ಹೂತುಹಾಕಿದ್ದ ಮತ್ತು ಕುಟುಂಬದ ದಾರಿ ತಪ್ಪಿಸಲು ಸುಳ್ಳು ಹೇಳಿ ಪ್ರಯತ್ನಿಸಿದ್ದ.
ತಬಸ್ಸುಮ್ ಅವರ ತಾಯಿ ಮಜೋಲಾ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ಇದು ಅವರಿಬ್ಬರಿಗೂ ಎರಡನೇ ವಿವಾಹವಾಗಿತ್ತು. ತಬಸ್ಸುಮ್ ಅವರ ಹೆಸರಿನಲ್ಲಿ ಅವರ ಮೊದಲ ಪತಿ ಕೊಟ್ಟಿದ್ದ ಮನೆ ಇದಾಗಿತ್ತು. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
ಕಾಣೆಯಾದ ಮಹಿಳೆಯ ಶವವನ್ನು ಅವನ ಮನೆಯಿಂದ ಮತ್ತು ಆಕೆಯ ತಲೆಯನ್ನು ಹತ್ತಿರದ ನದಿಯಿಂದ ಹುಡುಕಿ ವಶಪಡಿಸಿಕೊಳ್ಳಲಾಯಿತು. ಕೊಲೆಗೆ ಬಳಸಲಾದ ಕೊಡಲಿ ಪತ್ತೆಯಾಗಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ.
ಭಾರತದ ದಾಳಿ ಬಳಿಕ ಪಾಕ್ ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ರಹಸ್ಯ ಮಾಹಿತಿ ಬಯಲು..!