ಕ್ರೈಂಬೆಂಗಳೂರು

ಪಕ್ಕದ ಮನೆಯವರು ಕಿಟಕಿ ಬಾಗಿಲು ಹಾಕದೆ ಲೈಂಗಿಕ ಕ್ರಿಯೆ ಮಾಡುತ್ತಾರೆ ಎಂದು ದೂರು ನೀಡಿದ ಮಹಿಳೆ..! ಪೊಲೀಸರು ಹೇಳಿದ್ದೇನು..?

153

ನ್ಯೂಸ್ ನಾಟೌಟ್: 44 ವರ್ಷದ ಮಹಿಳೆ ಪೊಲೀಸರಿಗೆ ವಿಚಿತ್ರ ದೂರು ನೀಡಿದ್ದು, ಬೆಂಗಳೂರಿನ ಗಿರಿನಗರ ವ್ಯಾಪ್ತಿಯ ಅವಲಹಳ್ಳಿ ಏರಿಯಾದಲ್ಲಿ ಮಹಿಳೆ ವಾಸವಿರುವ ಬಾಡಿಗೆಮನೆಯ ಪಕ್ಕದ ಮನೆಯಲ್ಲಿ ಈ ವಿಚಿತ್ರ ದಂಪತಿ ವಾಸವಿದ್ದಾರೆ. ಮಹಿಳೆ ಇರುವ ಮನೆ ಬಾಗಿಲಿಗೆ ಎದುರಾಗಿಯೇ ಪಕ್ಕದ ಮನೆ ಬೆಡ್ ರೂಂ ಇದೆ ಮತ್ತು ಅಸಭ್ಯವಾಗಿ ವರ್ತಿಸುವ ಬಗ್ಗೆ ದೂರು ದಾಖಲಾಗಿದೆ.

ಪಕ್ಕದ ಮನೆ ದಂಪತಿ ಲೈಂಗಿಕ ಕ್ರಿಯೆ ಮಾಡುವಾಗ ಕಿಟಕಿ ಬಾಗಿಲು ತೆರೆದಿಟ್ಟುಕೊಂಡೇ ನಡೆಸುತ್ತಾರೆ; ಜೊತೆಗೆ ವಿಕೃತ ವರ್ತನೆ ಮಾಡುತ್ತಾರಂತೆ. ವಿಕೃತ ಸದ್ದುಗಳು ಹಾಗೂ ಹಾವಭಾವಗಳನ್ನು ಪ್ರದರ್ಶಿಸುವ ಇವರ ವರ್ತನೆಯಿಂದ ಮಹಿಳೆ ಕುಟುಂಬಕ್ಕೆ ಕಿರಿಕಿರಿ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿಲಾಗಿದೆ. ʼಕಿಟಕಿ ಬಾಗಿಲು ಹಾಕಿಕೊಳ್ಳಿʼ ಎಂದು ಹೇಳಿದರೆ, ʼನಮ್ಮ ಮನೆ, ನಮ್ಮ ಇಷ್ಟʼ ಎಂಬ ಉತ್ತರ ದಂಪತಿಯಿಂದ ಬಂದಿದೆ.

ಆಕ್ಷೇಪಿಸಿದಾಗ, ಪಕ್ಕದ ಮನೆ ವ್ಯಕ್ತಿ ಮಹಿಳೆಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆರೋಪಿಗೆ ಮನೆ ಮಾಲೀಕ ಮತ್ತು ಆತನ ಮಗನೂ ಸಾಥ್ ಕೊಟ್ಟಿದ್ದಾರಂತೆ. “ನಿಮಗೆ ಇಷ್ಟವಿಲ್ಲದಿದ್ರೇ ನೀವೇ ಮನೆ ಬಿಟ್ಟುಹೋಗಿ” ಎಂದು ದಬಾಯಿಸಿದ್ದಾರೆ. ಮನೆ ಮಾಲಿಕನೂ ರೌಡಿ ಹುಡುಗರನ್ನು ಕರೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

See also  ಮಂಗಳೂರು: ಮುಸ್ಲಿಂ ಯುವಕನಿಗೆ ದೈವದ ಆವೇಷ..! ಪಿಲಿ ಚಾಮುಂಡಿ ದೈವಸ್ಥಾನದಲ್ಲಿ ನಡೆದ ಸೋಜಿಗದ ಘಟನೆಗೆ ಕಾರಣವೇನು? ಕಂಪನಿ ಒಳಗೆ ಚಾಮುಂಡಿ ದೈವಸ್ಥಾನ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget