Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅಗತ್ಯ ಬಿದ್ದರೆ ಮದರಸಾದ ಮಕ್ಕಳನ್ನು ಯುದ್ಧಕ್ಕೆ ಬಳಸಿಕೊಳ್ತೀವಿ ಎಂದ ಪಾಕ್‌ ರಕ್ಷಣಾ ಸಚಿವ..! ಇಲ್ಲಿದೆ ಸಂಪೂರ್ಣ ಮಾಹಿತಿ

497

ನ್ಯೂಸ್ ನಾಟೌಟ್: ಅಗತ್ಯ ಬಿದ್ದರೆ ಮದರಸಾದ ಮಕ್ಕಳನ್ನು ಯುದ್ಧಕ್ಕೆ ಬಳಸಿಕೊಳ್ಳುತ್ತೇವೆ. ಅವರು ನಮ್ಮ ಎರಡನೇ ಹಂತದ ರಕ್ಷಣಾ ಪಡೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್‌ ಹುಚ್ಚುತನದ ಹೇಳಿಕೆ ನೀಡಿದ್ದಾರೆ.

ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಸಂಸತ್ತಿನ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪಾಕ್‌ ಸಚಿವ ಆಸಿಫ್, ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ದೇಶದ ಎರಡನೇ ಹಂತದ ರಕ್ಷಣಾ ಪಡೆ ಎಂದು ತಿಳಿಸಿದ್ದಾರೆ.

ಮದರಸಾ ವಿದ್ಯಾರ್ಥಿಗಳು ನಮ್ಮ ಎರಡನೇ ಹಂತದ ರಕ್ಷಣಾ ಸಿಬ್ಬಂದಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲಿ ಓದುತ್ತಿರುವ ಯುವಕರನ್ನು ಸಮಯ ಬಂದಾಗ ಅಗತ್ಯವಿರುವಂತೆ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

ನಾವು ಭಾರತದ ಡ್ರೋನ್‌ ದಾಳಿಯನ್ನು ತಡೆದಿಲ್ಲ. ನಮ್ಮ ಸ್ಥಳಗಳ ಬಗ್ಗೆ ಮಾಹಿತಿ ಸೋರಿಕೆಯಾಗಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಿದೆವು. ನಿನ್ನೆ ಭಾರತವು ನಮ್ಮ ಸ್ಥಳಗಳನ್ನು ಪತ್ತೆಹಚ್ಚಲು ಡ್ರೋನ್‌ ದಾಳಿ ಮಾಡಿತು. ನಾನು ತಾಂತ್ರಿಕ ವಿಷಯಗಳನ್ನು ವಿವರಿಸಲು ಸಾಧ್ಯವಿಲ್ಲ ಎಂದು ಪಾಕ್‌ ರಕ್ಷಣಾ ಸಚಿವ ಅಪಮಾನಗಳಿಂದ ತಪ್ಪಿಸಿಕೊಳ್ಳಲು ಹೇಳಿಕೆ ನೀಡಿದ್ದಾರೆ.  

“ಆಪರೇಷನ್ ಸಿಂದೂರ” ಟೈಟಲ್ ಗೆ ಸಿನಿಮಾ ನಿರ್ಮಾಪಕರರಿಂದ ಭಾರೀ ಬೇಡಿಕೆ..! ಸ್ಯಾಂಡಲ್ ವುಡ್, ಬಾಲಿವುಡ್‌ ನಿಂದ 2 ದಿನಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ..!

See also  ಭಾರತೀಯ ಆಹಾರ ನಿಗಮದಲ್ಲಿ 15 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget