ಕ್ರೈಂರಾಜ್ಯವೈರಲ್ ನ್ಯೂಸ್

ಹೊಸ ವರ್ಷಕ್ಕೆ ಗಿಫ್ಟ್ ರೂಪದಲ್ಲಿ ವೈದ್ಯರಿಗೆ ವಿಷದ ಲಡ್ಡು ಪಾರ್ಸೆಲ್..! ಕೆಲ ದಿನಗಳ ಬಳಿಕ ಬಯಲಾಯ್ತು ವಿಚಿತ್ರ ಲವ್ ಸ್ಟೋರಿ..!

204

ನ್ಯೂಸ್ ನಾಟೌಟ್: ಹೊಸ ವರ್ಷಕ್ಕೆಂದು ಶಿವಮೊಗ್ಗದ ಎನ್ ಇಎಸ್ ಶಿಕ್ಷಣ ಸಂಸ್ಥೆಯ ನಾಗರಾಜ್ ಮತ್ತು ಮನೋರೋಗ ತಜ್ಞ ಡಾ. ಪವಿತ್ರ ಮತ್ತು ಡಾ. ಅರವಿಂದ ಈ ಮೂವರಿಗೆ ಸ್ವೀಟ್ ಬಾಕ್ಸ್ ಕೊರಿಯರ್ ಮೂಲಕ ಬಂದಿತ್ತು. ಬಿಜೆಪಿ ಎಂಎಲ್ ಸಿ ಡಾ. ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ಈ ಸ್ವೀಟ್ ಬಾಕ್ಸ್ ಗಳು ಬಂದಿದ್ದವು. ಈ ಸ್ವೀಟ್ ಬಾಕ್ಸ್ ನಲ್ಲಿರುವ ಲಡ್ಡು ತಿಂದ ನಾಗರಾಜ್ ಗೆ ದೊಡ್ಡ ಶಾಕ್ ಆಗಿತ್ತು. ಸ್ವೀಟ್ ಸಿಹಿ ಆಗಿರದೇ ಕಹಿ ಆಗಿತ್ತು. ಅದರಲ್ಲಿ ಯಾರೋ ವಿಷ ಬೆರಸಿ ಸ್ವೀಟ್ ಬಾಕ್ಸ್ ಕೋರಿಯರ್ ಮಾಡಿದ್ದಾರೆ ಎನ್ನುವ ಅನುಮಾನ ನಾಗರಾಜ್ ​ಗೆ ಬಂದಿತ್ತು. ಇನ್ನೂ ಇಬ್ಬರು ವೈದ್ಯರಿಗೂ ಸ್ವೀಟ್ ಬಾಕ್ಸ್ ಬಂದಿತ್ತು. ಆದ್ರೆ ಅವರು ಅದನ್ನು ಓಪನ್ ಮಾಡಿರಲಿಲ್ಲ. ಕೋಟೆ ಪೊಲೀಸ್ ಠಾಣೆಯಲ್ಲಿ ಈ ವಿಷ ಲಡ್ಡು ಪ್ರಕರಣ ದಾಖಲು ಆಗಿತ್ತು. ಕೋಟೆ ಪೊಲೀಸರು ಪ್ರಕರಣದ ತನಿಖೆ ಮಾಡಿ ಈಗ ವಿಷ ಲಡ್ಡು ಪ್ರಕರಣವನ್ನು ಬಯಲು ಮಾಡಿದ್ದಾರೆ.

ಇದನ್ನು ಕೋರಿಯರ್ ಮಾಡಿದ್ದು ಓರ್ವ ಭಗ್ನ ಪ್ರೇಮಿ ಎಂದು ತನಿಖೆಯಲ್ಲಿ ಬಯಲಾಗಿದೆ. ಆತನ ಹೆಸರು ಸೌಹಾರ್ದ ಪಟೇಲ್(26) ಭದ್ರಾವತಿ ‌ಮೂಲದವನು. ಈತ ಕೆಲವು ವರ್ಷಗಳ ಹಿಂದೆ ಎನ್ ಇಎಸ್ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ. ಈ ಸಂದರ್ಭದಲ್ಲಿ ವೈದ್ಯನ ಮಗಳ ಮೇಲೆ ಈತನಿಗೆ ಲವ್ ಆಗಿತ್ತು. ಈ ಲವ್ ಸಕ್ಸಸ್ ಆಗಲಿಲ್ಲ. ಇದರಿಂದ ಯುವಕ ಮಾನಸಿಕ ಖಿನ್ನತೆಗೊಳಗಾಗಿದ್ದ. ತನ್ನ ಲವ್ ಬ್ರೇಕ್ ಮಾಡಿದ್ದರ ವಿರುದ್ದ ಸೇಡು ತೀರಿಸಲು ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕ ಸೇಡಿಗಾಗಿ ತಾನು ನಿತ್ಯ ಸೇವಿಸುತ್ತಿದ್ದ ಮಾತ್ರೆ ಮತ್ತು ಬೇವಿನ ರಸವನ್ನು ಲಡ್ಡುವಿನಲ್ಲಿ ಮಿಶ್ರಣ ಮಾಡಿದ್ದ. ಬಳಿಕ ಇದೇ ಲಡ್ಡುವಿನ ಬಾಕ್ಸ್ ಅನ್ನು ಕಾಲೇಜ್ ನಲ್ಲಿ ಲವ್ ಬ್ರೇಕ್ ಗೆ ಕಾರಣವಾದ ನಾಗರಾಜ್ ಮತ್ತು ಮನೋವೈದ್ಯರಿಬ್ಬರಿಗೆ ಲಡ್ಡು ಕಳುಹಿಸಿರುವುದು ತನಿಖೆಯಿದ ಬೆಳಕಿಗೆ ಬಂದಿದೆ.

ತಾನೇ ಕೋರಿಯರ್ ಮಾಡಿದ್ದಾನೆ ಎನ್ನುವ ಯಾವುದೇ ಸುಳಿವು ಬಿಟ್ಟು ಕೊಡದೇ ಸ್ವೀಟ್ ಬಾಕ್ಸ್ ಕೋರಿಯರ್ ಮಾಡಿದ್ದಾನೆ. ಆದ್ರೆ ಕೋರಿಯರ್ ಕಚೇರಿ ಮತ್ತು ಅಕ್ಕಪಕ್ಕದಲ್ಲಿರುವ ಸಿಸಿ ಕ್ಯಾಮರ್ ದಲ್ಲಿ ಈತನ ಚಲನವಲನ ಎಲ್ಲವೂ ಸೆರೆಯಾಗಿತ್ತು. ಇದೇ ಜಾಡು ಹಿಡಿದು ಕೋಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ತನ್ನ ಲವ್ ಬ್ರೇಕ್ ಅಪ್ ಸೇಡು ತೀರಿಸಲು ಹೋದ ಕಾನೂನು ಪದವಿ ಪಡೆದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Click

https://newsnotout.com/2025/01/instagram-love-by-16-and-10-year-old-childs-news-s/
https://newsnotout.com/2025/01/bengaluru-8-month-old-baby-got-influenced-by-hmpv-viral-bengaluru/
See also  15 ವರ್ಷದ ಹುಡುಗನನ್ನು ಮದುವೆಯಾದ 3 ಮಕ್ಕಳ ತಾಯಿ..! ಗಂಡ ತನ್ನನ್ನು ಪ್ರೀತಿಸುತ್ತಿಲ್ಲ, ಹೀಗಾಗಿಯೇ ಆತನನ್ನು ಬಿಟ್ಟು ಬಂದಿದ್ದೇನೆ ಎಂದ ಆಕೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget