ಕ್ರೈಂದೇಶ-ವಿದೇಶ

ಇಬ್ಬರು ಮಹಿಳೆಯರು ಸೇರಿ 3 ನಕ್ಸಲರ ಹತ್ಯೆ..!ಮನಬಂದಂತೆ ಗುಂಡು ಹಾರಿಸಿದ ಮಾವೋವಾದಿಗಳು..!

ನ್ಯೂಸ್ ನಾಟೌಟ್: ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮಾವೋವಾದಿಗಳು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಹತರಾಗಿದ್ದಾರೆ. ಮಾವೋವಾದಿಗಳ ಗುಂಪಿನ ಕೆಲವು ಸದಸ್ಯರು ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಭಮ್ರಗಡ ತಾಲೂಕಿನ ಕಟ್ರಂಗಟ್ಟ ಗ್ರಾಮದ ಬಳಿಯ ಅರಣ್ಯದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆ ದಾಳಿ ನಡೆಸಿದೆ.

ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯಲ್ಲಿದ್ದಾಗ ಮಾವೋವಾದಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಸಿ-60 ಸಿಬ್ಬಂದಿ ಪ್ರತಿದಾಳಿ ನಡೆಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ. ಗುಂಡಿನ ದಾಳಿ ನಿಂತ ಬಳಿಕ ಸ್ಥಳದಿಂದ ಓರ್ವ ಪುರುಷ ಮತ್ತು ಇಬ್ಬರು ಮಹಿಳಾ ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರಲ್ಲಿ ಒಬ್ಬನನ್ನು ಪೆರಿಮಿಲಿ ದಳದ ಉಸ್ತುವಾರಿ ಮತ್ತು ಕಮಾಂಡರ್ ವಾಸು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Related posts

ಸುಬ್ರಹ್ಮಣ್ಯ: ಮಂಗಳೂರಿನ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ, ನಾಲ್ವರ ಹಿಡಿದು ಪೊಲೀಸ್ ಠಾಣೆಗೆ ಎಳೆತಂದ ಪೊಲೀಸರು

ಬೆಂಗಳೂರಿನ ಖಾಸಗಿ ಹೋಟೆಲ್ ​​ಗೆ ಮತ್ತೆ ಬಾಂಬ್ ಬೆದರಿಕೆ ಪತ್ರ..! ರಾಮೇಶ್ವರಂ ಕೆಫೆ ಪ್ರಕರಣ ಮಾಸುವ ಮುನ್ನ ಮತ್ತೊಂದು ಆತಂಕ

ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಭಾರೀ ಡಿಮ್ಯಾಂಡ್..! 10 ಲಕ್ಷ ರೂ. ಆಫರ್ ತಿರಸ್ಕರಿಸಿದ ಬಡ ಚಮ್ಮಾರ..! ಇಲ್ಲಿದೆ ವಿಡಿಯೋ