ಕರಾವಳಿಕ್ರೈಂವೈರಲ್ ನ್ಯೂಸ್

ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದದ್ದೇಕೆ ಮುಸ್ಲಿಮರು..? ಹಿಂದೂ ಮೆರವಣಿಗೆಯ ವೇಳೆ ‘ಅಲ್ಲಾ ಹು ಅಕ್ಬರ್’ ಘೋಷಣೆ ಕೂಗಿದ ಕಿಡಿಗೇಡಿಗಳು! ಮುಂದೇನಾಯ್ತು?

188

ನ್ಯೂಸ್ ನಾಟೌಟ್:ವಿಜಯದಶಮಿ (Vijayadashami) ದಿನದಂದು ದೇವರ ಪಲ್ಲಕ್ಕಿ ಕೊಂಡೊಯ್ಯುವ ವೇಳೆ ಕೆಲವು ಕಿಡಿಗೇಡಿಗಳು ಅದನ್ನು ತಡೆದು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಘಟನೆ ಹಾವೇರಿಯ ಹಾನಗಲ್‍ನಲ್ಲಿ ನಡೆದಿದೆ.

ಐತಿಹಾಸಿಕ ಹಾನಗಲ್ (Hangal) ತಾರಕೇಶ್ವರ ದೇವರ ಬನ್ನಿ ಮುಡಿಯುವ ಪಲ್ಲಕ್ಕಿ ಉತ್ಸವದ ವೇಳೆ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಹಾನಗಲ್ ನಗರದ ಗ್ರಾಮದೇವಿ ಪಾದಗಟ್ಟಿ ಸರ್ಕಲ್‍ನಿಂದ ಕಾಶ್ಮೀರಿ ದರ್ಗಾ ಮಾರ್ಗವಾಗಿ ಪಲ್ಲಕ್ಕಿ ಹೊರಟಿತ್ತು.

ಬಳಿಕ ವಾಪಸ್ ತಾರಕೇಶ್ವರ ದೇವಸ್ಥಾನಕ್ಕೆ ಸಾಗುವ ವೇಳೆ ಶಾಂತಯುತವಾಗಿ ಸಾಗುತ್ತಿದ್ದ ಮೆರವಣಿಗೆಯನ್ನು ತಡೆದು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದಾರೆ.
ಈ ವೇಳೆ ದರ್ಗಾ ಬಳಿ ಬಂದಾಗ ಪಲ್ಲಕ್ಕಿ ತಡೆಯೋ ಅಗತ್ಯ ಏನಿತ್ತು? ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಪೊಲೀಸರು ಬಂದು ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಘಟನೆಯ ವೀಡಿಯೋ ಈಗ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

https://www.youtube.com/watch?v=mtKTEHG9O4I
See also  ‘ಛಾವಾ’ ಸಿನಿಮಾ ನೋಡಿ ರಾತ್ರಿ ನಿಧಿಗಾಗಿ ಕೋಟೆ ಅಗೆಯಲು ಬಂದ ನೂರಕ್ಕೂ ಹೆಚ್ಚು ಜನ..! ಛತ್ರಪತಿ ಶಿವಾಜಿ ಪುತ್ರನ ಕಥೆಯಲ್ಲಿ ನಿಧಿಯ ಉಲ್ಲೇಖ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget