Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ತಾಯಿ ನಾಯಿಯ ಎದುರೇ ಐದು ನಾಯಿ ಮರಿಗಳನ್ನು ನೆಲಕ್ಕೆ ಬಡಿದು ಕಲ್ಲಿನಿಂದ ಜಜ್ಜಿ ಕೊಂದ ಕ್ರೂರಿ..! ಮನಕಲಕುವ ವಿಡಿಯೋ ವೈರಲ್

1k

ನ್ಯೂಸ್ ನಾಟೌಟ್: ವೈರಲ್ ಆಗಿರುವ ವಿಡಿಯೋದಲ್ಲಿ ಹೋಮ್ ವ್ಯಾಲಿ ಅಪಾರ್ಟ್‌ಮೆಂಟ್‌ ನ ನೆಲಮಾಳಿಗೆಯಲ್ಲಿ ವ್ಯಕ್ತಿಯೊಬ್ಬರು ನವಜಾತ ನಾಯಿ ಮರಿಗಳನ್ನು ಎತ್ತಿ ಎತ್ತಿ ನೆಲಕ್ಕೆ ಬಡಿಯುತ್ತಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೈದರಾಬಾದ್ ನ ಫತೇನಗರದಲ್ಲಿ ಈ ಘಟನೆ ನಡೆದಿದೆ.

ವಿಡಿಯೋದಲ್ಲಿ ಅಪಾರ್ಟ್‌ಮೆಂಟ್‌ ನೆಲಮಾಳಿಗೆಯಲ್ಲಿ ವ್ಯಕ್ತಿಯೊಬ್ಬರು ನಾಯಿ ಜೊತೆಗೆ ಓಡಾಡುತ್ತಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ನಾಯಿಮರಿಗಳ ಹತ್ತಿರ ಹೋಗಿ ವ್ಯಕ್ತಿಯೂ ನಾಯಿಮರಿಗಳನ್ನು ಎತ್ತಿಕೊಂಡು ನೆಲಕ್ಕೆ ಹೊಡೆದು, ಕಲ್ಲಿನಿಂದ ಜಜ್ಜುತ್ತಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಆ ನಾಯಿಮರಿಗಳು ಸತ್ತಿದೆಯೇ ಎಂದು ನೋಡಿ ಮತ್ತೆ ಕೈಯಿಂದ ಗುದ್ದುತ್ತಿದ್ದಾನೆ. ಈ ವೇಳೆಯಲ್ಲಿ ತಾಯಿ ನಾಯಿ ಅತ್ತಿಂದ ಇತ್ತ ಓಡಾಡುತ್ತಿದೆ.

ಈ ಐದು ನಾಯಿಮರಿಗಳನ್ನು ಕೊಂದ ಈ ವ್ಯಕ್ತಿಯೂ ಉದ್ಯಮಿಯಾಗಿದ್ದು, ಈತನನ್ನು ಆಶಿಶ್ ಎಂದು ಗುರುತಿಸಲಾಗಿದೆ. ಈಗಾಗಲೇ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಾನು ಮಾಡಿದ ತಪ್ಪನ್ನು ಆರೋಪಿಯೂ ಒಪ್ಪಿಕೊಂಡಿದ್ದು, ಈ ಘಟನೆಗೆ ಸಂಬಂಧ ಪಟ್ಟಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಹೆಂಡತಿಯ ಎದುರೇ ಗಂಡನ ಶಿರಚ್ಛೇದ ಮಾಡಿ ತಲೆ ತೆಗೆದುಕೊಂಡು ಪರಾರಿ..! ದೇವಸ್ಥಾನದ ಬಳಿ ರುಂಡ ಪತ್ತೆ..!

ಚೀನಾದ ಈ ರೆಸ್ಟೋರೆಂಟ್ ನಲ್ಲಿ ಆನೆ ಲದ್ದಿಯಿಂದ ತಯಾರಾಗುತ್ತೆ ಲಡ್ಡು!!ಇದನ್ನು ತಿನ್ನಲೆಂದೇ ಕುಟುಂಬಸಮೇತರಾಗಿ ಜನ ಬರ್ತಾರೆ!!

ಕಲ್ಲಿದ್ದಲು ಇಲಾಖೆಯ 200 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

See also  ಧರ್ಮಸ್ಥಳ ಮೂಲದ ಆಕಾಂಕ್ಷ ನಿಗೂಢ ಸಾವು ಪ್ರಕರಣ,ಸೂಕ್ತ ತನಿಖೆಗೆ ಪಂಜಾಬ್‌ ಸರ್ಕಾರಕ್ಕೆ ಒತ್ತಾಯಿಸಿದ ದಿನೇಶ್‌ ಗುಂಡೂರಾವ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget