Latestವಿಡಿಯೋವೈರಲ್ ನ್ಯೂಸ್

ಮರದ ಬುಡದಿಂದ ಚಿಮ್ಮಿದ ನೀರು ಕಂಡು ಹೂವು, ಅರಶಿನ ಹಾಕಿ ಪೂಜೆ ಮಾಡಿದ ಜನರು..! ಅಸಲಿ ವಿಷಯವೇ ಬೇರೆಯಾಗಿತ್ತು..!

648

ನ್ಯೂಸ್ ನಾಟೌಟ್: ಮರದಿಂದ ನೀರು ಚುಮ್ಮುತ್ತಿದ್ದು, ಇದೊಂದು ಪವಾಡ ಹಾಗೂ ದೈವಿಕ ಶಕ್ತಿಯಿರುವ ಮರ ಎಂದು ಭಾವಿಸಿ ಸ್ಥಳೀಯ ಜನರು ಗುಲ್ ಮೊಹರ್ ಮರವನ್ನು ಪುಣೆಯ ಜನ ಪೂಜಿಸಿದ್ದಾರೆ. ಈ ಘಟನೆಯೂ ಪಿಂಪ್ರಿಯ ಪ್ರೇಮ್ ಲೋಕ್ ಪಾರ್ಕ್ ನಲ್ಲಿ ನಡೆದಿದೆ ಎನ್ನಲಾಗಿದೆ.

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪುರಸಭೆಗೆ ತಿಳಿಸಿದಾಗ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾಗ ಈ ಮರದಿಂದ ನೀರು ಚಿಮ್ಮುತ್ತಿರುವುದರ ಹಿಂದಿನ ಕಾರಣ ಬೇರೆಯೇ ಆಗಿತ್ತು.

@thesonawanex ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ನೀರು ಚಿಮ್ಮುತ್ತಿರುವ ಮರವನ್ನು ದೈವಿಕ ಶಕ್ತಿಯುಳ್ಳ ಮರವೆಂದು ಭಾವಿಸಿ ಸ್ಥಳೀಯರು ಮರದ ಕಾಂಡಕ್ಕೆ ಹೂವು, ಅರಶಿಣ ಹಾಗೂ ಕುಂಕುಮ ಅರ್ಪಿಸಿ ಭಕ್ತಿ ಭಾವದಿಂದ ಪೂಜಿಸುತ್ತಿರುವುದನ್ನು ಕಾಣಬಹುದು. ಈ ನೀರನ್ನು ಪವಿತ್ರವೆಂದು ಭಾವಿಸಿ ತಲೆಗೆ ಹಚ್ಚಿಕೊಳ್ಳುತ್ತಿರುವುದನ್ನು ಕಾಣಬಹುದು.

ಮರದ ಕೆಳಗೆ ಇದ್ದ ಹಳೆಯ ನೀರಿನ ಪೈಪ್‌ ಲೈನ್ ಸೋರಿಕೆಯಿಂದಾಗಿ ನೀರು ಚಿಮ್ಮುತ್ತಿದೆ ಎನ್ನಲಾಗಿದೆ. ಡೆಪ್ಯೂಟಿ ಎಂಜಿನಿಯರ್ ಪ್ರವೀಣ್ ಧುಮಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಪವಾಡವಲ್ಲ. ಮರದ ಕೆಳಗೆ ಹಳೆಯ ನೀರಿನ ಪೈಪ್‌ ಲೈನ್ ಹಾದು ಹೋಗಿದೆ. ಇದರ ಸೋರಿಕೆಯಿಂದ ಟೊಳ್ಳಾದ ಕಾಂಡದ ಮೂಲಕ ನೀರು ಹೊರಬರುತ್ತಿದೆ ಎಂದಿದ್ದಾರೆ.

ಟೋಲ್ ಗೇಟ್ ತೆರಿಗೆಯಲ್ಲಿ ಮಹತ್ವದ ಬದಲಾವಣೆ..! ಹೇಗಿರಲಿದೆ ಕಿಲೋಮೀಟರ್ ಆಧಾರಿತ ಹೊಸ ಟೋಲ್ ವ್ಯವಸ್ಥೆ..?

See also  ನಟ ದರ್ಶನ್ ಬಳಿ 2 ಯು.ಎಸ್ ಮೇಡ್ ಪಿಸ್ತೂಲ್‍ಗಳು ಪತ್ತೆ..! ಲೋಕಸಭಾ ಚುನಾವಣಾ ವೇಳೆಯೂ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿರಲಿಲ್ಲ ದಾಸ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget