ನ್ಯೂಸ್ ನಾಟೌಟ್: ಅಭಿಷೇಕ್ ಅಲಿಯಾಸ್ ಶೂಟರ್ ಎಂಬಾತ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದ. ದರೋಡೆ, ಸುಲಿಗೆ.. ಕಳ್ಳತನ ಹೀಗೆ ಹತ್ತಾರು ಕೇಸ್ ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ವೇಳೆ ಪೊಲೀಸರು ಆತನನ್ನು ಬಂಧಿಸಲು ಹೋದಾಗ ದೊಡ್ಡ ಹೈಡ್ರಾಮಾವೇ ಸೃಷ್ಟಿಸಿದ್ದಾನೆ. ಗುಜರಾತ್ ನ ಅಹ್ಮದಾಬಾದ್ ನಲ್ಲಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ.
ಕೊಲೆ, ದರೋಡೆ, ಕಿಡ್ನಾಪ್ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅಭಿಷೇಕ್ ಅಲಿಯಾಸ್ ಶೂಟರ್,ಕೆಲ ದಿನಗಳಿಂದ ಆರೋಪಿಯನ್ನ ಹುಡುಕುತ್ತಿದ್ದ ಪೊಲೀಸರು ಆತನ ಮನೆ ಬಗ್ಗೆ ಖಚಿತ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ. ಜೊತೆಗೆ ಆರೋಪಿ ತಪ್ಪಿಸಿಕೊಳ್ಳಬಾರದು ಎಂದು ಇಡೀ ಅಪಾರ್ಟ್ಮೆಂಟ್ ಸುತ್ತ ನಾಕಬಂದಿ ವಿಧಿಸಿದ್ದರು.. ಪೊಲೀಸರು ಅರೆಸ್ಟ್ ಮಾಡಲು ಬಂದಿದ್ದಾರೆ ತಿಳಿಯುತ್ತಿದ್ದಂತೆ ಆರೋಪಿ ಹೈಡ್ರಾಮಾ ಮಾಡಲು ಶುರುಮಾಡಿದ್ದಾನೆ.. ಫ್ಲಾಟ್ ನಿಂದ ಬಿದ್ದು ಸಾಯಿಯುವುದಾಗಿ ಬೆದರಿಕೆ ಹಾಕಿದ್ದಾನೆ.
ಸತತ ಮೂರು ಗಂಟೆಗಳ ಕಾಲ ಆರೋಪಿ ಅಭಿಷೇಕ್, ಪೊಲೀಸರಿಗೆ ಸತಾಯಿಸಿದ್ದಾನೆ.. ಇಷ್ಟೇಲ್ಲಾ ಅಲ್ಲದೇ ನನಗೆ ಅನ್ಯಾಯ ಆಗಿದೆ ಎಂದು ಇನ್ ಸ್ಟ್ರಾಗ್ರಾಂನಲ್ಲೂ ಲೈವ್ಗೆ ಹೋಗಿದ್ದಾನೆ.. ಅಂತಿಮವಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆತನ ಮನವೊಲಿಸಿ ಕೆಳಗಿಸಿದ್ದಾರೆ. ಬಳಿಕ ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಇಷ್ಟು ದಿನ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ತಲೆ ಮರಿಸಿಕೊಂಡು ಓಡಾಡುತ್ತಿದ್ದ ಆರೋಪಿ ಶೂಟರ್ ಕೊನೆಗೂ ಸಿಕ್ಕಿಬಿದಿದ್ದಾನೆ.