ಕ್ರೈಂಬೆಂಗಳೂರು

22ರ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತೆ..! ಉಳಿದುಕೊಳ್ಳಲು ಮನೆ ಕೊಟ್ಟವಳಿಗೆ ಸಾವಿನ ಮನೆ ತೋರಿದ ಪ್ರೇಮಿ!

355

ನ್ಯೂಸ್ ನಾಟೌಟ್ :  22 ವರ್ಷದ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ತಾನು ಮಾಡಿದ ತಪ್ಪಿಗೆ ತನ್ನ ಜೀವ ಕಳೆದುಕೊಂಡ ಘಟನೆ ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಜೆಸಿ ನಗರದಲ್ಲಿ ಬುಧವಾರ ನಡೆದಿದೆ. ಸರಗುಣಂ ಎಂಬ ಹೆಸರಿನ ೩೫ ವರ್ಷದ ಮೃತ ಮಹಿಳೆ ಹಲವು ಹತ್ತಿರದ ಮನೆಗಳಿಗೆ ಹೋಗಿ ಮನೆ ಕೆಲಸ ಮಾಡುತ್ತದ್ದಳು.

ಆಟೋ ಚಾಲಕನಾಗಿದ್ದ ಗಣೇಶ್ ಎಂಬ 22ರ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಲ್ಲದೆ 50 ಸಾವಿರ ಹಣವನ್ನ ಯುವಕನಿಗೆ ನೀಡಿ, ಬಾಡಿಗೆ ಮನೆ ಕೂಡ ಮಾಡಿಕೊಟ್ಟಿದ್ದಳು. ಈ ಮಧ್ಯೆ ಬೇರೆ ಮಹಿಳೆ ಜೊತೆ ಗಣೇಶ್ ಆತ್ಮೀಯ ಸಲುಗೆಯಿಂದ ಇರುವ ಮಾಹಿತಿ ತಿಳಿದು ನಿನ್ನೆ(ಏ.26) ಯುವಕನ ಮನೆಗೆ ಬಂದಿದ್ದಳು ಎನ್ನಲಾಗಿದೆ. ಇನ್ನು ಈ ವೇಳೆ ನಾನೇ ಹಣಕೊಟ್ಟು, ಮನೆ ಮಾಡಿಕೊಟ್ಟು ನಿನ್ನ ನೋಡಿಕೊಳ್ಳುತ್ತಿದ್ದೇನೆ.

ನನ್ನ ಹಣ ವಾಪಸ್ ಕೊಡು, ಮಹಿಳೆ ಯಾರೆಂದು ಹೇಳು ಎಂದು ಪ್ರಶ್ನೆ ಮಾಡಿದ್ದು, ಗಲಾಟೆ ಜೋರಾಗಿದೆ. ಈ ವೇಳೆ ಗಣೇಶ್ ನಾನು ಸಾಯುವುದಾಗಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ಅಡ್ಡ ಬಂದಿದ್ದು, ಯುವಕ ಕೆಳ ಇಳಿದಿದ್ದ. ಇದೇ ಸಮಯದಲ್ಲಿ ತಾನು ಸಾಯುತ್ತಿನಿ ಎಂದು ಮಹಿಳೆ ನೇಣಿನ ಕುಣಿಕೆ ಹಾಕೊಂಡಿದ್ದಾಳೆ. ಇದೇ ವೇಳೆ ಗಣೇಶ್ ಹಗ್ಗ ಎಳೆದು ಚೇರ್ ಒದ್ದಿದ್ದು, ಹಗ್ಗ ಕತ್ತಿಗೆ ಬಿಗಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಂತರ ಗಣೇಶ್ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.

ಪೊಲೀಸರ ದಿಕ್ಕು ತಪ್ಪಿಸಲು ಆತ್ಮಹತ್ಯೆ ಯತ್ನ ಮಾಡಿದ್ದಾಳೆಂದು ನಾಟಕವಾಡಿದ್ದಾನೆ. ಸದ್ಯ ಬಸವೇಶ್ವರ ನಗರ ಪೊಲೀಸರಿಂದ ಆರೋಪಿ ಗಣೇಶ್​ನನ್ನ ಬಂಧಿಸಲಾಗಿದ್ದು, ಇನ್ನು ಆ ಮಹಿಳೆಗೆ ಮದುಯವೆಯಾಗಿ 17 ವರ್ಷದ ಮಗು ಇರುವುದಾಗಿ ಮಾಹಿತಿ ಲಭಿಸಿದೆ. ಆದರೂ ಕೂಡ ಗಣೇಶ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಇಕೆ ಇದೀಗ ಸಾವಿನ ಮನೆ ಸೇರಿದ್ದಾಳೆ. ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಪ್ರಗತಿಯಲ್ಲಿದೆ ಎಂದು ವರದಿ ತಿಳಿಸಿದೆ.

See also  ಶಾಸಕ ಹರೀಶ್ ಪೂಂಜ ಮನೆಯಲ್ಲಿ ಸೇರಿದ ಬಿಜೆಪಿ ಶಾಸಕರ ದಂಡು..! ಶಾಸಕರನ್ನು ಬಂಧಿಸಿದರೆ ದ.ಕ. ಜಿಲ್ಲೆ ಬಂದ್ ಮಾಡಲಾಗುವುದು ಎಂದ ಸಂಸದ ನಳಿನ್ ಕುಮಾರ್ ಕಟೀಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget