ಕರಾವಳಿಕ್ರೈಂರಾಜಕೀಯರಾಜ್ಯವಿಡಿಯೋವೈರಲ್ ನ್ಯೂಸ್

ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ..! ಈ ಬಗ್ಗೆ ವಕೀಲ ಜಗದೀಶ್ ಹೇಳಿದ್ದೇನು..? ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್ : ವಕೀಲ ಜಗದೀಶ್ ಮಹದೇವ್ ಬಿಜೆಪಿಯ ಮಾಜಿ ಸಿಎಂ ಒಬ್ಬರ ವಿಡಿಯೋ ಕೋರ್ಟ್ ಗೆ ನೀಡುತ್ತೇನೆ ಎಂದ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಸಿಟಿ ಸಿವಿಲ್​ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ವಕೀಲ ಜಗದೀಶ್ ಮಹದೇವ್ ವಿರುದ್ದವೂ ನಿರ್ಬಂಧಕಾಜ್ಞೆ ಕೋರಿದ್ದು, ಈ ಸಂಬಂಧ‌ ಕೋರ್ಟ್​, ನಾಳೆ(ಆಗಸ್ಟ್ 28) ಆದೇಶ ಪ್ರಕಟಿಸಲಿದೆ. ಆದ್ರೆ, ಬಸವರಾಜ ಬೊಮ್ಮಾಯಿ ಅವರು ಏಕೆ ನಿರ್ಬಂಧಕಾಜ್ಞೆ ತರಲು ಹೊರಟ್ಟಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ.

ಓರ್ವ ವ್ಯಕ್ತಿಯ ಚಾರಿತ್ರ್ಯ ವಧೆ, ಮಾನಹಾನಿಯಾಗುವಂತೆ ಯಾರಾದರು ಹೇಳಿಕೆ, ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ. ಅದನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೋರ್ಟ್​​ನಿಂದ ನಿರ್ಬಂಧಕಾಜ್ಞೆ ತರುವುದು ಮಾಮೂಲಿಯಾಗಿದೆ. ಆದ್ರೆ, ಇದೀಗ ಬಸವರಾಜ ಬೊಮ್ಮಾಯಿ ಅವರು ಇದೀಗ ಏಕೆ ಏಕಾಎಕಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತರಲು ಹೊರಟ್ಟಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಈ ಬಗ್ಗೆ ವಕೀಲ ಜಗದೀಶ್ ಮಾತನಾಡಿದ್ದು, ಅಲ್ಲದೆ ಬೊಮ್ಮಾಯಿ ವಿರುದ್ಧ ಏನಾದರೂ ಆರೋಪಗಳು ಇದ್ದಾವೆಯೇ? ಯಾರಾದರೂ ಅವುಗಳನ್ನು ಬಹಿರಂಗಪಡಿಸಲು ಮುಂದಾಗಿದ್ದಾರಾ? ಹೀಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Click

https://newsnotout.com/2024/08/ksrtc-kannada-news-kollegala-magic-ksrtc-travellers-saved/
https://newsnotout.com/2024/08/darshan-kidi-k-darshan-shift-to-ballary-accued-number-changed/
https://newsnotout.com/2024/08/rajyapala-governer-marriage-age-of-girl-increased-kannada-news/
https://newsnotout.com/2024/08/malayalam-actor-siddique-kannada-news-fir-case-police/
https://newsnotout.com/2024/08/krishna-janmastami-2-girls-kannada-news-at-up-police-investigation-tree/

Related posts

ಇಸ್ರೇಲ್‌ ನಲ್ಲಿ ಸಿಲುಕಿರುವ ಭಾರತೀಯರಿಗೆ ಭಾರತ ಅಭಯ, “ಆಪರೇಷನ್ ಅಜಯ್” ಮೂಲಕ ಹೇಗೆ ರಕ್ಷಿಸಲಿದೆ ಸರ್ಕಾರ?

ಸುಳ್ಯ: ‘ಕುರುಂಜಿಯವರು ಸ್ಥಾಪಿಸಿದ ವಿದ್ಯಾ ಸಂಸ್ಥೆಗಳು ಅಣ್ಣ-ತಮ್ಮಂದಿರ ದ್ವೇಷಕ್ಕೆ ಬಲಿ ಆಗಬಾರದು’, ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿ ಹೇಳಿದ್ದೇನು..?

ಹೋಟೆಲ್‌ನಲ್ಲಿ ಕೇರಳದ ದಂಪತಿ ನಿಗೂಢ ಹತ್ಯೆಯ ಶಂಕೆ..! ಮೂವರು ವಾಮಾಚಾರಕ್ಕೆ ಬಲಿಯಾದರಾ..?