ನ್ಯೂಸ್ ನಾಟೌಟ್: ಆಕಸ್ಮಿಕವಾಗಿ ಪಿಸ್ತೂಲ್ ಗುಂಡು ಸಿಡಿದು ನಿಷೇಧಿತ ಭಯೋತ್ಪಾದಕ ಸಂಘಟನೆಯ ಸಹ ಸ್ಥಾಪಕ ಅಮೀರ್ ಹಂಝಾ ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಾಹೋರ್ ನಡೆದಿದೆ ಎನ್ನಲಾಗಿದೆ.
ಲಷ್ಕರ್ ಇ ತೊಯ್ಬಾ ಸಂಘಟನೆಯ 17 ಮಂದಿ ಸ್ಥಾಪಕ ಸದಸ್ಯರಲ್ಲಿ ಹಂಝಾ ಕೂಡಾ ಒಬ್ಬನಾಗಿದ್ದು, ಲಾಹೋರ್ ನ ಮನೆಯೊಳಗೆ ಈ ಘಟನೆ ನಡೆದಿರುವುದಾಗಿ ಖಚಿತಪಡಿಸಿವೆ.
ಪಿಸ್ತೂಲ್ ನಿಂದ ಸಿಡಿದ ಗುಂಡಿನಿಂದ ಹಂಝಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿ ವಿವರಿಸಿದೆ. ಆದರೆ ಈ ಊಹಾಪೋಹ ಸುಳ್ಳು ಎಂದು ಕೆಲವು ಮೂಲಗಳು ಹೇಳಿವೆ.
ಅಮೀರ್ ಹಂಝಾ ಅಫ್ಘಾನ್ ಮುಜಾಹಿದೀನ್ ಹಿರಿಯ ಸದಸ್ಯನಾಗಿದ್ದು, ಪ್ರಚೋದನಕಾರಿ ಭಾಷಣ ಮತ್ತು ಕಟು ಲೇಖನಗಳಿಂದಾಗಿ ಪ್ರಸಿದ್ಧಿ ಪಡೆದಿದ್ದ.