ನ್ಯೂಸ್ ನಾಟೌಟ್: ಬಾಂಗ್ಲಾದೇಶದ ಇಸ್ಲಾಮಿಕ್ ಮೂಲಭೂತವಾದಿಯೊಬ್ಬ ಕೋಲ್ಕತ್ತಾದ ಮೇಲೆ ತಾಲಿಬಾನ್ ಶೈಲಿಯ ಆತ್ಮಹತ್ಯಾ ದಾಳಿ ನಡೆಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಗಳು’ ಎಂಬ ಹಂಚಿಕೊಳ್ಳಲಾಗಿದೆ.
ವೀಡಿಯೊದಲ್ಲಿ, ಆ ವ್ಯಕ್ತಿ ತನ್ನ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾ, ಬಾಂಗ್ಲಾದೇಶ ಸೇನೆಯು ತನಗೆ ಆದೇಶಿಸಿದರೆ, ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ಯೋಜಿಸಬಹುದು ಎಂದು ಹೇಳಿದ್ದಾನೆ. ನನಗೆ 70 ಅಲ್ಲ 7 ಯುದ್ಧ ವಿಮಾನಗಳ ಅಗತ್ಯವಿಲ್ಲ. ಏಕೆಂದರೆ ಅಲ್ಲಿ ಯಾರು ವಾಸಿಸುತ್ತಾರೆಂದು ನನಗೆ ತಿಳಿದಿದೆ. ಅವರೆಲ್ಲಾ ವಿಗ್ರಹ ಆರಾಧಕರು. ಹಿಂದೂಗಳು ಹೇಡಿಗಳು ಹೀಗಾಗಿ ನಾನು ಆತ್ಮಹತ್ಯಾ ಬಾಂಬರ್ ಗಳನ್ನು ಕಳುಹಿಸುತ್ತೇನೆ ಎಂದು ಹೇಳಿದ್ದಾರೆ.
Islamists are reportedly planning to take over Kolkata using Taliban-style tactics, including suicide bombings. Their determination is clear, and hatred toward Hindus is growing among segments of the Bangladeshi Muslim population. pic.twitter.com/sVolchZo0v
— Voice of Bangladeshi Hindus 🇧🇩 (@VHindus71) May 12, 2025
ಬಾಂಗ್ಲಾದೇಶಿ ಸೇನೆ ಅನುಮತಿಸಿದರೆ, ಗರಿಷ್ಠ ಸಂಖ್ಯೆಯ ಆತ್ಮಹತ್ಯಾ ಬಾಂಬರ್ ಗಳನ್ನು ಕೋಲ್ಕತ್ತಾಗೆ ಕಳುಹಿಸುವುದಾಗಿಯೂ ಆತ ವಿಡಿಯೋದಲ್ಲಿ ಹೇಳಿದ್ದಾನೆ. ಸಾಯೋಕೆ ರೆಡಿಯಾಗಿ, ನಂತರ ಕೊಲ್ಲಿ ಎಂದು ಇಸ್ಲಾಮ್ ಹೇಳುತ್ತದೆ. ತಾಲಿಬಾನ್ ಕೂಡ ಅದೇ ವಿಧಾನವನ್ನು ಬಳಸಿಕೊಂಡು ಅಮೆರಿಕ ಮತ್ತು ರಷ್ಯಾವನ್ನು ಸೋಲಿಸಿತ್ತು ಎಂದು ಆತ ಹೇಳಿದ್ದಾನೆ. ಬಾಂಬ್ ಗಳನ್ನು ತುಂಬಿದ ಮೋಟಾರ್ ಬೈಕ್ ಗಳಲ್ಲಿ ಆತ್ಮಹತ್ಯಾ ಬಾಂಬರ್ ಗಳು ಸೇನಾ ಶಿಬಿರಗಳಿಗೆ ಪ್ರವೇಶಿಸಿ ಅವುಗಳನ್ನು ಸ್ಫೋಟಿಸುವ ತಾಲಿಬಾನ್ ನ ತಂತ್ರವನ್ನು ಉಲ್ಲೇಖಿಸಿದ್ದಾನೆ. ಅಂತಹ ಒಂದು ದಾಳಿಯಲ್ಲಿ 300 ಅಮೆರಿಕನ್ನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾನೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸಮಯದಲ್ಲಿ ಈ ವಿಡಿಯೋ ಬೆಳಕಿಗೆ ಬಂದಿದೆ.
ಭಾರತ-ಪಾಕ್ ಯುದ್ಧ ನಿಲ್ಲಿಸದಿದ್ದರೆ ಎಲ್ಲಾ ವ್ಯಾಪಾರ ನಿಲ್ಲಿಸುವುದಾಗಿ ಬೆದರಿಸಿದ್ದರಾ ಟ್ರಂಪ್..! ಇಲ್ಲಿದೆ ವಿಡಿಯೋ