ಕರಾವಳಿಕಾಸರಗೋಡು

ಕೇರಳ ಸ್ಪೋಟ ಪ್ರಕರಣ: 3000 ರೂ. ನಲ್ಲಿ ಬಾಂಬ್ ತಯಾರಿಸಿದ್ದೇಗೆ ಈತ? ಈ ದುಷ್ಕರ್ಮಿ ಯಾರು? ಈತನ ಉದ್ದೇಶವೇನು..?

252

ನ್ಯೂಸ್‌ ನಾಟೌಟ್‌: ಕೊಚ್ಚಿಯ ಕಲಮಶ್ಶೇರಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಯೆಹೋವನ ಪ್ರಾರ್ಥನಾ ಸಭೆ ವೇಳೆ ಸಂಭವಿಸಿದ ಭೀಕರ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ ಒಟ್ಟು 52 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಲಯತ್ತೂರು ನಿವಾಸಿ ಲಿಬಿನಾ (12) ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ.

ಎರಡು ದಿನಗಳ ಹಿಂದೆ ನಡೆದ ಈ ಘಟನೆಯ ಪ್ರಮುಖ ಆರೋಪಿ ಡೊಮಿನಿಕ್ ಮಾರ್ಟಿನ್ ತಾನು ಬಾಂಬ್ ತಯಾರಿಕೆಯನ್ನು ಇಂಟರ್ನೆಟ್ ನಲ್ಲಿ ನೋಡಿ ಕಲಿತಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

ತಾನು ಕೇವಲ ಮೂರು ಸಾವಿರ ರೂ. ಖರ್ಚಿನಲ್ಲಿ ಬಾಂಬ್ ತಯಾರಿ ಮಾಡಿದ್ದೆ ಎಂದು ಮಾರ್ಟಿನ್ ಹೇಳಿಕೊಂಡಿದ್ದಾನೆ.
ಇಲೆಕ್ಟ್ರಿಕ್ ಸರ್ಕಿಟ್ ನಲ್ಲಿ ಪರಿಣಿತನಾಗಿರುವ ಡೊಮಿನಿಕ್ ಮಾರ್ಟಿನ್ ಹಲವು ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡಿದ್ದ. ಕಳೆದ ಐದು ವರ್ಷಗಳಿಂದ ಮಾರ್ಟಿನ್ ಕುಟುಂಬ ಕೊಚ್ಚಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಈತ ಈ ಸ್ಫೋಟ ನಡೆಸಲೆಂದೆ ಎರಡು ತಿಂಗಳ ಹಿಂದೆ ದುಬೈನಿಂದ ವಾಪಾಸ್ ಕೇರಳಕ್ಕೆ ಬಂದಿದ್ದ ಎಂದು ವರದಿ ಹೇಳಿದೆ.

ಸ್ಫೋಟಕ್ಕೆ ಬಳಿಸಿದ ಐಇಡಿಗಳನ್ನು ಕಡಿಮೆ ಗುಣಮಟ್ಟದ ಸ್ಫೋಟಕಗಳಿಂದ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸ್ಪೋಟಕಗಳನ್ನು ಸಾಮಾನ್ಯವಾಗಿ ಪಟಾಕಿಗಳ ತಯಾರಿಕೆಗೆ ಬಳಸಲಾಗುತ್ತದೆ.

ಮೂಲಗಳ ಪ್ರಕಾರ ಮಾರ್ಟಿನ್ ತನ್ನ ಮನೆಯಲ್ಲಿ ಐಇಡಿಗಳನ್ನು ಜೋಡಿಸಿದ್ದಾನೆ. ಯೆಹೋವನ ಸಮಾವೇಶದಲ್ಲಿ ಭಾಗವಹಿಸಿದವರನ್ನು ಕೊಲ್ಲುವ ಉದ್ದೇಶದಿಂದ ಮಾರ್ಟಿನ್ ಸ್ಫೋಟಕಗಳನ್ನು ಹಾಲ್‌ ನೊಳಗೆ ಇರಿಸಿದ್ದ ಎನ್ನಲಾಗಿದೆ.

ಶರಣಾಗುವ ಮೊದಲು, ಮಾರ್ಟಿನ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಸಂಘಟನೆಯ ಬೋಧನೆಗಳು “ದೇಶದ್ರೋಹಿ” ಆಗಿರುವುದರಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಸಮುದಾಯವು ಜನರಿಗೆ, ಮಕ್ಕಳಿಗೆ ಸಹ ತಪ್ಪು ಮೌಲ್ಯಗಳನ್ನು ಕಲಿಸುತ್ತಿದೆ ಎಂದು ಆತ ವೀಡಿಯೊದಲ್ಲಿ ಹೇಳಿದ್ದು ಈಗ ವೈರಲ್ ಆಗುತ್ತಿದೆ.

See also  ಸುಳ್ಯ: ಕಳೆದೆರಡು ದಿನಗಳಿಂದ ನಾಪತ್ತೆಯಾದ ಬಾಲಕ ಮೈಸೂರಿನಲ್ಲಿ ಪತ್ತೆ,ಈ ಘಟನೆ ನಡೆದಿದ್ದೇಗೆ?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget