Latestಕ್ರೈಂವೈರಲ್ ನ್ಯೂಸ್

ಪತ್ನಿ ಮತ್ತು ಅತ್ತೆಗೆ ಬೈಯುತ್ತಾ ಇನ್‌ ಸ್ಟಾಗ್ರಾಂ ಲೈವ್‌ ಬಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ..! 2 ಮಹಿಳೆಯರು ಅರೆಸ್ಟ್..!

867

ನ್ಯೂಸ್ ನಾಟೌಟ್: ತನ್ನ ಸಾವಿಗೆ ಪತ್ನಿ ಮತ್ತು (ಆಕೆಯ ತಾಯಿ)ಅತ್ತೆಯೇ ಕಾರಣ ಎಂದು ಆರೋಪಿಸಿದ ಪತಿ, ಇನ್‌ ಸ್ಟಾಗ್ರಾಂ ಲೈವ್‌ ಬಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಮಾ.16ರಂದು ಈ ಘಟನೆ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಿವಪ್ರಕಾಶ್‌ ತ್ರಿಪಾಠಿ ಎಂದು ಗುರುತಿಸಲಾಗಿದೆ.

ಶಿವಪ್ರಕಾಶ್‌ 2 ವರ್ಷದ ಹಿಂದೆ ಪ್ರಿಯಾ ಶರ್ಮಾ ಎಂಬುವವರನ್ನು ಮದುವೆಯಾಗಿದ್ದರು. ಪತ್ನಿಗೆ ಮತ್ತೂಬ್ಬರ ಜೊತೆ ಸಂಬಂಧವಿದೆ ಎಂಬುದು ಪತಿಗೆ ತಿಳಿದಿತ್ತು ಎನ್ನಲಾಗಿದೆ. ಅಲ್ಲದೇ ಪತ್ನಿ ತವರು ಮನೆಗೆ ಹೋಗಿದ್ದ ಕಾರಣ ಇಬ್ಬರು ಸೇರಿ ತನ್ನ ವೈವಾಹಿಕ ಜೀವನವನ್ನು ಹಾಳು ಮಾಡಿದರು ಎಂದು ಆರೋಪಿಸಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ದಿನಾ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

 

See also  ಕೊಟ್ಟ ಹಣ ವಾಪಸ್ ಮಾಡದ್ದಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget