ನ್ಯೂಸ್ ನಾಟೌಟ್: ಪಾಕಿಸ್ತಾನವು ಮೇ 8ರಂದು ಡ್ರೋನ್‌ಗಳನ್ನು ಬಳಸಿ ಭಾರತದ 24 ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳು ಈ ದಾಳಿಯ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿದವು ಮತ್ತು ಡ್ರೋನ್‌ಗಳನ್ನು ತಟಸ್ಥಗೊಳಿಸಿದವು. ಮೇ 8ರ ರಾತ್ರಿ ಪಾಕಿಸ್ತಾನವು 210 ನಿಮಿಷಗಳಲ್ಲಿ 500 ಸಣ್ಣ ಡ್ರೋನ್ ಗಳನ್ನು ಉಡಾಯಿಸುವ ಮೂಲಕ ಕಾರ್ಯಾಚರಣೆಯನ್ನು ನಡೆಸಿತು. 24 ಭಾರತೀಯ ನಗರಗಳನ್ನು ಟಾರ್ಗೆಟ್ ಮಾಡಿ ಈ ದಾಳಿ ನಡೆಸಲಾಗಿತ್ತು ಎಂದು ರಕ್ಷಣಾ ಮೂಲಗಳು ಬಹಿರಂಗಪಡಿಸಿವೆ.
ಏಕಕಾಲಕ್ಕೆ ವಿವಿಧ ನಗರಗಳಲ್ಲಿ ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ಮತ್ತು ವಾಯುಪಡೆಯು L70, ZU-23, ಶಿಲ್ಕಾ ಮತ್ತು ಆಕಾಶ್ ಸೇರಿದಂತೆ ಕ್ಷಿಪಣಿ ವಿರೋಧಿ ವ್ಯವಸ್ಥೆಗಳ ಶ್ರೇಣಿಯನ್ನು ಬಳಸಿಕೊಂಡು ಯಶಸ್ವಿಯಾಗಿ ವಿಫಲಗೊಳಿಸಿತು. ಮೇ 8ರಂದು ರಾತ್ರಿ ಒಂದು ಲಜ್ಜೆಗೆಟ್ಟ ದುಸ್ಸಾಹಸಕ್ಕೆ ಹೊರಟ ಪಾಕಿಸ್ತಾನವು, 24 ಭಾರತೀಯ ನಗರಗಳನ್ನು ಗುರಿಯಾಗಿಸಿಕೊಂಡು 210 ನಿಮಿಷ 500 ಸಣ್ಣ ಡ್ರೋನ್‌ಗಳನ್ನು ಉಡಾಯಿಸಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಪಾಕಿಸ್ತಾನ ಗುರುವಾರ ರಾತ್ರಿ 8ರಿಂದ 11.30ರ ನಡುವೆ ಡ್ರೋನ್ ದಾಳಿ ನಡೆಸಿತು. ಅದಕ್ಕೆ ಭಾರತೀಯ ಸಶಸ್ತ್ರ ಪಡೆಗಳು ತಕ್ಕ ಉತ್ತರ ನೀಡಿದವು.
ರಷ್ಯಾ ನಿರ್ಮಿತ ಎಸ್ -400 ಮತ್ತು ದೇಶೀಯವಾಗಿ ನಿರ್ಮಿತ ಆಕಾಶ್ ನಿಂದ ನಡೆಸಲ್ಪಡುವ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಡ್ರೋನ್ ದಾಳಿಯನ್ನು ಎದುರಿಸಿತು. ಪಾಕಿಸ್ತಾನದ 1 ಡ್ರೋನ್ ಕೂಡ ಭಾರತೀಯ ಮಣ್ಣನ್ನು ಮುಟ್ಟಿ ಅವ್ಯವಸ್ಥೆಯನ್ನು ಸೃಷ್ಟಿಸುವ ಮೊದಲೇ ಅವುಗಳನ್ನು ಹೊಡೆದುರುಳಿಸಿತು. ನಿನ್ನೆ ಸಂಜೆ ಜಮ್ಮು ನಾಗರಿಕ ವಿಮಾನ ನಿಲ್ದಾಣವನ್ನು ಅಪ್ಪಳಿಸುವಲ್ಲಿ ಕೇವಲ ಒಂದು ಡ್ರೋನ್ ಮಾತ್ರ ಯಶಸ್ವಿಯಾಯಿತು.
ಪಾಕಿಸ್ತಾನ ನಿನ್ನೆ ಗುರಿಯಾಗಿಸಿಕೊಂಡ ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಸೇರಿವೆ.
ಅದಕ್ಕೆ ಭಾರತೀಯ ಸೇನೆಯು ಕೆಲವೇ ನಿಮಿಷಗಳ ಅಂತರದಲ್ಲಿ ಪಾಕಿಸ್ತಾನದ ಹೃದಯಭಾಗಕ್ಕೆ ಅಂದರೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್, ಪಂಜಾಬ್ ಪ್ರಾಂತ್ಯದ ಅತಿದೊಡ್ಡ ನಗರ ಲಾಹೋರ್ ಮತ್ತು ಸಿಯಾಲ್ಕೋಟ್ ಮೇಲೆ ಭಾರತ ಡ್ರೋನ್ ದಾಳಿ ನಡೆಸಿತು.