ನ್ಯೂಸ್ ನಾಟೌಟ್: ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಕೋಮಾದಲ್ಲಿದ್ದಾನೆ ಎಂದು ಹೇಳಿದ ರೋಗಿಯೋರ್ವ ತಾನಾಗಿಯೇ ಆಸ್ಪತ್ರೆಯಿಂದ ಹೊರಬಂದು ಚಿಕಿತ್ಸೆಗಾಗಿ 1 ಲಕ್ಷ ರೂ. ವೈದ್ಯರು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ ಘಟನೆ ಮಧ್ಯಪ್ರದೇಶದ ರತ್ಲಾಮ್ ನಲ್ಲಿ ನಡೆದಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ದೀನದಯಾಳ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಾಟೆಯಲ್ಲಿ ರತ್ಲಾಮ್ ನ ಮೋತಿ ನಗರದ ನಿವಾಸಿ ಬಂಟಿ ನಿನಾಮ ಗಾಯಗೊಂಡಿದ್ದರು. ಮೊದಲು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು.
Shocking 🚨
A Coma Patient Walks Out of Private Hospital in Ratlam Exposes Alleged Medical Scam!
A dramatic scene unfolded outside a private hospital in Ratlam when a so-called “coma patient” walked out in a semi-naked state, carrying a urine bag and a bottle. pic.twitter.com/ohukTLkRuq
— यमराज (@autopsy_surgeon) March 6, 2025
ವೈರಲ್ ವೀಡಿಯೊದಲ್ಲಿ, ಮೂಗಿಗೆ ಟ್ಯೂಬ್ ಮತ್ತು ಸೊಂಟದ ಸುತ್ತ ಕೊಲೊಸ್ಟೊಮಿ ಚೀಲ ಹಾಕಿರುವ ಬಂಟಿ ನಿನಾಮಾ ಎಂಬಾತ ಅರೆಬೆತ್ತಲೆಯಾಗಿ ನಿಂತುಕೊಂಡಿರುವುದು ಕಂಡು ಬಂದಿದೆ. ಅವರು ವೈದ್ಯರು ಚಿಕಿತ್ಸೆ ಆರಂಭಿಸಲು 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬಂಟಿ ನಿನಾಮ ಎಂಬವರ ಪತ್ನಿ ಕೂಡ ಆಸ್ಪತ್ರೆಯ ಆಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಪತಿ ಕೋಮಾದಲ್ಲಿರುವ ಬಗ್ಗೆ ನಮಗೆ ತಿಳಿಸಲಾಯಿತು. 12 ಗಂಟೆಯೊಳಗೆ 40 ಸಾವಿರ ಬಿಲ್ ಪಾವತಿಸಿದೆ, ಹೆಚ್ಚಿನ ಹಣದ ವ್ಯವಸ್ಥೆ ಮಾಡಲು ಹೊರಗೆ ಹೋಗಿದ್ದ ನಾನು ವಾಪಸ್ ಬರುವಾಗ ಸ್ವತಃ ನನ್ನ ಪತಿಯೇ ಆಸ್ಪತ್ರೆಯ ಹೊರಗೆ ನಿಂತುಕೊಂಡಿದ್ದರು ಎಂದು ಹೇಳಿದರು. ಆರೋಪಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿ ನಿರಾಕರಿಸಿದೆ. ಐಸಿಯುನಲ್ಲಿ ದಾಖಲಾಗಿರುವ ರೋಗಿಯ ಒಟ್ಟು ಬಿಲ್ ಕೇವಲ 8,000 ರೂ. ಹೆಚ್ಚುವರಿ ಹಣದ ಬೇಡಿಕೆ ಆರೋಪ ಆಧಾರ ರಹಿತ ಎಂದು ಹೇಳಿದರು.
View this post on Instagram