ಕ್ರೈಂವೈರಲ್ ನ್ಯೂಸ್

ಬಾಲಕಿಯನ್ನು ಮೋಸದಿಂದ ಕಾಮುಕರ ಬಳಿ ತಂದು ಬಿಟ್ಟ ಮಹಿಳೆ! ನಾಲ್ವರು ಅಪ್ರಾಪ್ತರಿಂದ ಅಪ್ರಾಪ್ತೆಯ ಅತ್ಯಾಚಾರ..! ಏನಿದು ಅಮಾನವೀಯ ಘಟನೆ..?

42
Spread the love

ನ್ಯೂಸ್ ನಾಟೌಟ್ : ಪರಿಚಿತ ಮಹಿಳೆಯೊಬ್ಬರು ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಕಾಮುಕರ ಬಳಿ ಬಿಟ್ಟಿರುವ ಘಟನೆ ದೆಹಲಿಯಲ್ಲಿ ಜ.1 ರಂದು ಬೆಳಕಿಗೆ ಬಂದಿದೆ. ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಅತ್ಯಾಚಾರವೆಸಗಿದ್ದಾರೆ ಎಂದು ವರದಿ ತಿಳಿಸಿದೆ.

ಉತ್ತರ ದೆಹಲಿಯ ಸದರ್ ಬಜಾರ್‌ನಲ್ಲಿ 12 ವರ್ಷದ ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ. ಘಟನೆ ಜನವರಿ 1 ರಂದು ಸಂಭವಿಸಿದೆ, ಆದರೆ ಗುರುವಾರ (ಜ.4) ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.

ದೂರು ಬಂದ ತಕ್ಷಣ ಸೆಕ್ಷನ್ 376ಡಿ (ಗ್ಯಾಂಗ್ ರೇಪ್) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ಡಿಸಿಪಿ ಮನೋಜ್ ಕುಮಾರ್ ಮೀನಾ ಶನಿವಾರ (ಜನವರಿ 6) ತಿಳಿಸಿದ್ದಾರೆ. ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳಲ್ಲಿ ಒಬ್ಬನನ್ನು ಸದರ್ ಬಜಾರ್ ಕೊಳೆಗೇರಿಯಲ್ಲಿ ಟೀ ಮಾರುತ್ತಿದ್ದ ಸುರೇಶ್ ಕುಮಾರ್ (38) ಎಂದು ಪೊಲೀಸರು ಗುರುತಿಸಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೂ ಆರೋಪಿಯಾಗಿದ್ದಾಳೆ. ಆಮಿಷ ಒಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ. ಈ ಮಹಿಳೆಯನ್ನು ಸೌಂದರ್ಯ ಎಂದು ಗುರುತಿಸಲಾಗಿದೆ.

ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಸಾಮೂಹಿಕ ಅತ್ಯಾಚಾರದ ಇತರ ಮೂವರು ಆರೋಪಿಗಳು 12, 14 ಮತ್ತು 15 ವರ್ಷ ವಯಸ್ಸಿನವರಾಗಿದ್ದಾರೆ. ಈ ಮೂವರು ಅಪ್ರಾಪ್ತರು ಕೂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಅಂದು ಸೌಂದರ್ಯ ಬಾಲಕಿ ಬಳಿ ಬಂದು ಯಾವುದೋ ವಿಷಯದ ಬಗ್ಗೆ ಆಮಿಷವೊಡ್ಡಿ ಮನೆಯಿಂದ ನಾಲ್ವರು ಆರೋಪಿಗಳಿದ್ದ ಸ್ಥಳಕ್ಕೆ ಕರೆದೊಯ್ದಿದ್ದಳು, ಅದೇ ಸ್ಥಳದಲ್ಲಿ ಅತ್ಯಾಚಾರ ನಡೆದಿದೆ. ಘಟನೆ ಬಳಿಕ ಹೇಗೋ ಬವಾನಾದ ರೈಲು ಹತ್ತಿದ್ದಾಳೆ, ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.
ಸದರ್ ಬಜಾರ್‌ಗೆ ಕಸ ಸಂಗ್ರಹಿಸಲು ಬಂದಾಗ ಆ ಪ್ರದೇಶದಲ್ಲಿ ನೆಲೆಸಿರುವ ತನ್ನ ಸೋದರ ಮಾವನ ಬಳಿ ನಡೆದ ಘಟನೆಯನ್ನೆಲ್ಲ ಹೇಳಿದ್ದಾಳೆ. ಇದಾದ ಬಳಿಕ ಸೋದರ ಸಂಬಂಧಿ ಅಪ್ರಾಪ್ತ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದು, ನಂತರ ಎಲ್ಲರೂ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

https://newsnotout.com/2024/01/lovers-ethical-policing-news/
See also  ಸರಳಿಕಟ್ಟೆ ಮನೆಗೆ ನುಗ್ಗಿ 1.20 ಲಕ್ಷ ರೂ. ಹತ್ತು ಪವನ್ ಚಿನ್ನ ದೋಚಿದ ಕಳ್ಳರು
  Ad Widget   Ad Widget   Ad Widget   Ad Widget