ಕಾಸರಗೋಡುಕ್ರೈಂವೈರಲ್ ನ್ಯೂಸ್

ಯಾರೂ ವಾಸವಿಲ್ಲದ ಮನೆಯ ಫ್ರಿಡ್ಜ್ ​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ..! 14 ಎಕರೆ ಜಾಗದಲ್ಲಿರುವ ಪಾಳು ಬಿದ್ದ ಮನೆ..!

ನ್ಯೂಸ್ ನಾಟೌಟ್: ಯಾರೂ ವಾಸವಿಲ್ಲದ ಮನೆಯೊಂದರ ಫ್ರಿಡ್ಜ್ ​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಜನವಸತಿಯಿಲ್ಲದ ಮನೆಯೊಂದರ ಫ್ರಿಡ್ಜ್​ ನಲ್ಲಿ ತಲೆಬುರುಡೆ ಹಾಗೂ ಮೂಳೆಗಳು ಪ್ಯಾಕ್ ​ನಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಈ ಜಾಗವನ್ನು ಸಮಾಜಘಾತುಕ ಶಕ್ತಿಗಳ ತಾಣವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರದೇಶ ಪಂಚಾಯಿತಿ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳವನ್ನು ಶೋಧಿಸಿದ್ದಾರೆ. ಹುಡುಕಾಟದ ಸಮಯದಲ್ಲಿ, ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ, ಸುಮ್ಮನೆ ಕುತೂಹಲಕ್ಕೆಂದು ಫ್ರಿಡ್ಜ್​ ಬಾಗಿಲು ತೆರೆದಾಗ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ.

ಮೂಳೆಗಳನ್ನು ಮೂರು ಪ್ರತ್ಯೇಕ ಕವರ್‌ ಗಳಲ್ಲಿ ಪ್ಯಾಕ್ ಮಾಡಿರುವುದು ಕಂಡುಬಂದಿದೆ. ತಲೆಬುರುಡೆಯು ಹಲವಾರು ವರ್ಷಗಳಷ್ಟು ಹಳೆಯದಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ನಿಖರವಾದ ವಯಸ್ಸನ್ನು ಪರೀಕ್ಷೆಯ ನಂತರವೇ ನಿರ್ಧರಿಸಬಹುದು. ಮನೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ ಮತ್ತು ಫ್ರಿಡ್ಜ್‌ ನಲ್ಲಿ ಕಂಪ್ರೆಸರ್ ಇರಲಿಲ್ಲ ಎನ್ನುವುದು ತಿಳಿದುಬಂದಿದೆ.

ಪ್ರಸಿದ್ಧ ಚೊಟ್ಟಣಿಕ್ಕರ ಭಗವತಿ ದೇವಸ್ಥಾನದ ಉತ್ತರಕ್ಕೆ ಸುಮಾರು 4 ಕಿ.ಮೀ ದೂರದಲ್ಲಿರುವ ಚೊಟ್ಟನಿಕ್ಕಾರದ ಎರುವೇಲಿ ಬಳಿಯ ಅರಮನೆ ಚೌಕದಲ್ಲಿರುವ ಈ ಮನೆಗೆ ಹಲವು ವರ್ಷಗಳ ಹಿಂದೆಯೇ ಬೀಗ ಹಾಕಲಾಗಿತ್ತು.
14 ಎಕರೆ ಜಾಗದಲ್ಲಿರುವ ಈ ಮನೆಯು ಎರ್ನಾಕುಲಂ ಮೂಲದವರ ಒಡೆತನದಲ್ಲಿದೆ ಮತ್ತು ಸುಮಾರು 15-20 ವರ್ಷಗಳಿಂದ ಇಲ್ಲಿ ಯಾರೂ ವಾಸವಿರಲಿಲ್ಲ. ಪೊಲೀಸರು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Click

https://newsnotout.com/2025/01/actor-vishal-hospitalized-in-apolo-chennai-kannada-news-viral-jd/
https://newsnotout.com/2025/01/kannada-news-nepala-kannada-news-india-nepala-news/
https://newsnotout.com/2025/01/darshan-thugudeepa-kannada-news-viral-issue-police-department-appeal-d/
https://newsnotout.com/2025/01/mangaluru-mangaluru-central-jail-kannada-news-d/
https://newsnotout.com/2025/01/naxal-wrote-a-latter-to-karnataka-and-kerala-govt-as-surrender-latter/
https://newsnotout.com/2025/01/hmpv-kannada-news-health-jp-nadda-announces-road-map-and-health-care/

Related posts

ಸುಳ್ಯದ ಕಲ್ಕುಡ ದೈವದ ಪವರ್‌..! ಹರಕೆ ಹೊತ್ತ ಮರುಕ್ಷಣವೇ ದೈವ ಸನ್ನಿಧಿಯ ಎದುರಲ್ಲಿ ಬೈಕ್ ಸಮೇತ ಸಿಕ್ಕಿಬಿದ್ದ ಕಳ್ಳ..! ಬೈಕ್ ಕದ್ದು ಅಜ್ಜಿಮನೆಗೆ ತಿರುಗಾಡಿದ ವೈದ್ಯಕೀಯ ವಿದ್ಯಾರ್ಥಿ ಪೊಲೀಸರ ಅತಿಥಿಯಾಗಿದ್ದೇಗೆ..?

ಸಂಪಾಜೆ: ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪರಾರಿ

ಪ್ರಜ್ವಲ್ ವಿಷಯ ಡಿಸಿಎಂಗೆ ಮೊದಲೇ ಗೊತ್ತಿತ್ತಾ..? ಅಂದು ಡಿಕೆಶಿಯನ್ನು ಭೇಟಿಯಾಗಿದ್ದ ಸೂರಜ್ ರೇವಣ್ಣ ಹೇಳಿದ್ದೇನು..?