Latestಬೆಂಗಳೂರುರಾಜಕೀಯರಾಜ್ಯ

ಸಾಲುಮರದ ತಿಮ್ಮಕ್ಕನ ಮನೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಸರ್ಕಾರದಿಂದ ನಿವೇಶನ

598

ನ್ಯೂಸ್ ನಾಟೌಟ್: ಸಾಲುಮರದ ತಿಮ್ಮಕ್ಕನಿಗೆ ಸರ್ಕಾರ ಹಂಚಿಕೆ ಮಾಡಿರುವ ನಿವೇಶನದಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ಬುಧವಾರ(ಜೂ.18) ಗುದ್ದಲಿಪೂಜೆ ನೆರವೇರಿಸಿದರು.

ಬಿಡಿಎ ರಚಿತ ನಾಡಪ್ರಭು ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್‌ನಲ್ಲಿ 50/80 ಅಡಿ ವಿಸ್ತೀರ್ಣದ ನಿವೇಶನವನ್ನು ತಿಮ್ಮಕ್ಕ ಅವರಿಗೆ ಸರ್ಕಾರ ಹಂಚಿಕೆ ಮಾಡಿದೆ. 2022ರ ಜೂ.24ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ತಿಮ್ಮಕ್ಕಗೆ ಈ ಸೈಟ್‌ನ ಹಂಚಿಕೆ ಪತ್ರವನ್ನು ಹಸ್ತಾಂತರಿಸಿದ್ದರು. ಈಗ ಈ ಸೈಟ್‌ ನಲ್ಲೇ ಮನೆ ನಿರ್ಮಿಸಲು ಭೂಮಿಪೂಜೆ ನೆರವೇರಿಸಿದ್ದಾರೆ.

ಈ ವೇಳೆ ಮಾತನಾಡಿದ ತಿಮ್ಮಕ್ಕ, ಸ್ವಂತ ಸೂರು ಹೊಂದುವ ಆಸೆಗೆ ಸರ್ಕಾರ ಸೈಟ್ ನೀಡಿದೆ. ಇದರಿಂದ ನನಗೆ ತುಂಬಾ ಖುಷಿ ಆಗಿದೆ. ಸೈಟ್ ಕೊಡಿಸುವಲ್ಲಿ ಗೃಹ ಸಚಿವ ಡಾ. ಪರಮೇಶ್ವರ್ ಸಾಕಷ್ಟು ಶ್ರಮಿಸಿದ್ದಾರೆ. ಆದಷ್ಟು ಬೇಗನೆ ಮನೆ ಕಟ್ಟಿ ಇಲ್ಲೇ ವಾಸಿಸುವುದಾಗಿ ತಿಳಿಸಿದರು.

ಬಿಡಿಎ ರಚಿಸುತ್ತಿರುವ ಕೆಂಪೇಗೌಡ ಲೇಔಟ್‌ ಅನ್ನು ಹಸಿರು ಬಡಾವನೆಯನ್ನಾಗಿಸುವ ಆಶಯ ಹೊಂದಿರುವುದು ಶ್ಲಾಘನೀಯ. ಇದಕ್ಕೆ ತಕ್ಕಂತೆ ಬೇಗನೆ ವಿವಿಧ ಭಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ರೂಪಿಸಬೇಕು. ಇದರಲ್ಲಿ ನಾನೂ ಕೂಡ ಪಾಲ್ಗೊಳ್ಳಲಿದ್ದೇನೆ. ನಾವು ನೆಡುವ ಗಿಡಗಳು ಮರವಾಗಿ ಪ್ರಾಣಿ ಪಕ್ಷಿಗಳಿಗೆ ಆಹಾರ, ಆಶ್ರಯ ಒದಗಿಸುತ್ತದೆ. ಹೀಗಾಗಿ ಎಲ್ಲರೂ ಮನೆ ಸೈಟ್‌ ಗಳ ಮುಂದೆ ಗಿಡ ನೆಟ್ಟು ಬೆಳೆಸಬೇಕು ಎಂದು ತಿಮ್ಮಕ್ಕ ಹೇಳಿದ್ದಾರೆ.

ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದಲ್ಲಿ ಶಾರುಖ್ ಖಾನ್ ನಟನೆ..? ನಟ ಶಿವರಾಜ್‌ ಕುಮಾರ್‌ ಗೂ ಪ್ರಮುಖ ಪಾತ್ರ..!

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 56 ಪೊಲೀಸ್ ಸಿಬ್ಬಂದಿಯ ವರ್ಗಾವಣೆ..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ಬಿಸಿಸಿಐನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ..! ಯಾರೆಲ್ಲ ಅರ್ಜಿ ಸಲ್ಲಿಸಬಹುದು..? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget