Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಸಾರ್ವಜನಿಕರ ಮುಂದೆಯೇ ಯುವತಿಗೆ ಹಲವು ಬಾರಿ ಚಾಕುವಿನಿಂದ ಇರಿದ ಯುವಕ..! ಇಬ್ಬರೂ ಆಸ್ಪತ್ರೆಗೆ ದಾಖಲು..!

767

ನ್ಯೂಸ್ ನಾಟೌಟ್: ನೈಋತ್ಯ ದೆಹಲಿಯ ಕಿರ್ಬಿ ಪ್ಲೇಸ್ ಬಸ್ ನಿಲ್ದಾಣ ಪ್ರದೇಶದಲ್ಲಿ 19 ವರ್ಷದ ಯುವತಿಯ ಮೇಲೆ ಸಾರ್ವಜನಿಕರ ಮುಂದೆಯೇ ವ್ಯಕ್ತಿಯೊಬ್ಬ ಹಲವಾರು ಬಾರಿ ಚಾಕುವಿನಿಂದ ಇರಿದ ಘಟನೆ ನಡೆದಿದೆ.

20 ವರ್ಷದ ವ್ಯಕ್ತಿ ಮಹಿಳೆಗೆ ಇರಿದ ನಂತರ ಅದೇ ಚಾಕುವಿನಿಂದ ತನ್ನನ್ನು ತಾನು ಗಾಯಗೊಳಿಸಿಕೊಂಡಿದ್ದಾನೆ ಎನ್ನಲಾಗಿದೆ. ಭಾನುವಾರ(ಎ.6) ರಾತ್ರಿ 9.30 ರ ಸುಮಾರಿಗೆ ದಾರಿಹೋಕರೊಬ್ಬರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

“ಹುಡುಗಿಯ ಕುತ್ತಿಗೆ ಮತ್ತು ಹೊಟ್ಟೆಯ ಎಡಭಾಗಕ್ಕೆ ಗಂಭೀರ ಗಾಯಗಳಾಗಿವೆ. ಸ್ಥಳದಿಂದ ಚಾಕು ಪತ್ತೆಯಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿ ಅಮಿತ್ ಮತ್ತು ಸಂತ್ರಸ್ತ ಯುವತಿ ಕಳೆದ ಒಂದು ವರ್ಷದಿಂದ ಸ್ನೇಹಿತರಾಗಿದ್ದರು ಮತ್ತು ಯಾವುದೋ ವಿಷಯದ ಬಗ್ಗೆ ಜಗಳವಾಡಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. “ಇಬ್ಬರನ್ನು ಡಿಡಿಯು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ.

ಬಿಎನ್‌ ಎಸ್‌ ನ ಸೆಕ್ಷನ್ 109(1) ರ ಅಡಿಯಲ್ಲಿ ದೆಹಲಿ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಆರೋಪಿ ಅಮಿತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ” ಎಂದು ಅಧಿಕಾರಿ ಹೇಳಿದ್ದಾರೆ.

ಮಾವನ ಮೇಲೆಯೇ ಸೊಸೆಗೆ ಪ್ರೀತಿ..! ನಾಪತ್ತೆ ಪ್ರಕರಣ ದಾಖಲಾದ ಬಳಿಕ ಠಾಣೆಗೆ ಬಂದು ಹಾಜರಾದ ಜೋಡಿ ಹೇಳಿದ್ದೇನು..?

See also  ಮಡಿಕೇರಿ: ಮೀನಾ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ, ಕ್ರೂರಿಯಿಂದ ರುಂಡ ಕತ್ತರಿಸಲ್ಪಟ್ಟು ಸಾವಿಗೀಡಾದ ಬಾಲಕಿ ಮನೆಗೆ ಗೃಹ ಸಚಿವರ ಭೇಟಿ, ಹೇಳಿಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget