ಕ್ರೈಂರಾಜ್ಯವೈರಲ್ ನ್ಯೂಸ್

ಮಗುವಿನೊಂದಿಗೆ ಹೇಮಾವತಿ ನಾಲೆಗೆ ಹಾರಿ ಇಡೀ ಕುಟುಂಬವೇ ಸಾಮೂಹಿಕ ಆತ್ಮಹತ್ಯೆ..! ಇಲ್ಲಿದೆ ಮನಕಲಕುವ ಘಟನೆ..!

249

ನ್ಯೂಸ್ ನಾಟೌಟ್: ಕುಟುಂಬದ ಮೂವರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಇಂದು(ಆ.16) ನಡೆದಿದೆ.

ಸಾಲಬಾಧೆ ತಾಳಲಾರದೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗಂಡ-ಹೆಂಡತಿ ಹಾಗೂ ಪುತ್ರಿಯನ್ನು ಶ್ರೀನಿವಾಸ್ (43), ಶ್ವೇತಾ (36) ಹಾಗೂ ನಾಗಶ್ರೀ (13) ಎಂದು ಗುರುತಿಸಲಾಗಿದೆ. ಮೃತ ದುರ್ದೈವಿಗಳು ಹಾಸನ ಜಿಲ್ಲೆ, ಚನ್ನರಾಯಪಟ್ಟಣ ನಗರದ ಕೆರೆಬೀದಿಯ ನಿವಾಸಿಗಳು ಎಂದು ತಿಳಿದು ಬಂದಿದೆ.
ದುಡಿದ ಹಣ ಕಳೆದುಕೊಂಡು ಸಾಲಗಾರರ ಕಾಟ ಒತ್ತಡ ತಾಳಲಾಗದೆ ಕುಟಂಬ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದೆ ಎಂದು ವರದಿ ತಿಳಿಸಿದೆ. ಪತಿ, ಪತ್ನಿ ಮತ್ತು ಓದುತಿದ್ದ ಪುಟ್ಟ ಹೆಣ್ಣು ಮಗಳು ಹೀಗೆ ಎಲ್ಲರೂ ಜೀವ ಕಳೆದುಕೊಂಡಿದ್ದಾರೆ. ಮೃತ ಶ್ರೀನಿವಾಸ ಕಾರು ಚಾಲಕನಾಗಿದ್ದು, ಅವರ ಪತ್ನಿ ಶ್ರವಣಬೆಳಗೊಳ ಸಮೀಪದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು ಎನ್ನಲಾಗಿದೆ.

ಮಗಳನ್ನು ಶಾಲೆ ಓದಿಸುವ ಸಲುವಾಗಿ ಶ್ರೀನಿವಾಸ ಅವರು ಸ್ವಲ್ಪ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಮೃತ ಪತಿ ಶ್ರೀನಿವಾಸ್ ಅವರು ದುಡಿದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿ ಕಳೆದುಕೊಂಡಿದ್ದರು ಎನ್ನಲಾಗಿದೆ. ಕಳೆದ ಮಂಗಳವಾರ ಮನೆಯಿಂದ ಗಂಡ, ಹೆಂಡತಿ ಮತ್ತು 13 ವರ್ಷದ ಮಗಳನ್ನು ಕರೆದುಕೊಂಡು ಹೋದ ದಂಪತಿ ನಾಲೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

Click

https://newsnotout.com/2024/08/rishab-shetty-and-kgf-yash-kantara-national-film-award-kannada-sandalwood/
https://newsnotout.com/2024/08/theft-and-live-in-forest-suspence-story-of-theef-who-was-arrested/
https://newsnotout.com/2024/08/mangluru-bengaluru-high-private-bus-collision-kannada-news/
https://newsnotout.com/2024/08/doctors-kannada-news-nurse-darmendra-kumar-case-file-protest/
https://newsnotout.com/2024/08/case-on-constable-and-he-selected-for-cm-medal-award-in-independence-day/
https://newsnotout.com/2024/08/guarantee-scheme-ddd-fkarnataka-govt-bpl-viral-news/
https://newsnotout.com/2024/08/doctor-issue-misbehaviour-west-bengal-kannada-news-cm/
https://newsnotout.com/2024/08/atal-bihari-vajpayee-remembering-kannada-news-narendra-modi-and-others/
See also  ಪಂಜ: ವಿದ್ಯುತ್ ಕಂಬವೇರಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಭಾರಿ ಅವಘಡ, ಕಾರ್ಮಿಕ ಸಾವು, ಸಿಡಿಲು ಬಡಿಯಿತೇ..? ವಿದ್ಯುತ್ ಶಾಕ್ ತಗುಲಿತೇ..? ಸಿಗಬೇಕಿದೆ ಉತ್ತರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget