ಕ್ರೈಂವೈರಲ್ ನ್ಯೂಸ್

ಬಸ್ ಚಾಲಕನಿಗೆ ದಿಢೀರ್ ಹೃದಯಾಘಾತ..! ಕೊನೆಯುಸಿರೆಳೆಯುವ ಮುನ್ನ 48 ಮಂದಿಯನ್ನು ರಕ್ಷಿಸಿದ್ದೇಗೆ ಆತ..? ಆ ರಾತ್ರಿ ಏನಾಯ್ತು..?

ನ್ಯೂಸ್ ನಾಟೌಟ್: ಬಸ್ ಚಲಾಯಿಸುತ್ತಿದ್ದ ಸಂದರ್ಭ ಚಾಲಕ (Driver) ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿದ್ದು, ಕೊನೆಯುಸಿರೆಳೆಯುವ ಮೊದಲು ಬಸ್‌ನಲ್ಲಿದ್ದ 48 ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

ಕಂಧಮಾಲ್ ಜಿಲ್ಲೆಯ ಪಬುರಿಯಾ ಗ್ರಾಮದ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಅಂತ್ಯಕೊಂಡ ಆ ಚಾಲಕನನ್ನು ಸನಾ ಪ್ರಧಾನ್ ಎಂದು ಗುರುತಿಸಲಾಗಿದ್ದು, ಬಸ್ ಚಾಲನೆ ಮಾಡುವಾಗ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಸ್ಟೇರಿಂಗ್‌ನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ.

ಈ ವೇಳೆ ಬಸ್ ಅನ್ನು ರಸ್ತೆ ಬದಿಯ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲಿಸುವ ಮೂಲಕ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಬಸ್ ‘ಮಾ ಲಕ್ಷ್ಮಿ’ ಸಾಮಾನ್ಯವಾಗಿ ಪ್ರತಿ ರಾತ್ರಿ ಕಂಧಮಾಲ್‌ನ ಸಾರಂಗರ್‌ನಿಂದ ಜಿ ಉದಯಗಿರಿ ಮೂಲಕ ರಾಜ್ಯದ ರಾಜಧಾನಿ ಭುವನೇಶ್ವರಕ್ಕೆ ಚಲಿಸುತ್ತದೆ. ಘಟನೆಯ ಬಳಿಕ ಚಾಲಕನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿನ ವೈದ್ಯರು ಆತ ಕೊನೆಯುಸಿರೆಳೆದಿರುವುದಾಗಿ ಘೋಷಿಸಿದ್ದಾರೆ.

ಪರೀಕ್ಷೆಯ ನಂತರ ಪ್ರಧಾನ್ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ತನಿಖೆಯನ್ನೂ ಆರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Related posts

ಅಸಹ್ಯಕರ ತುಂಡುಡುಗೆ ತೊಟ್ಟು ಅರೆಬರೆ ಬಟ್ಟೆಯ ಬಗ್ಗೆಯೇ ಪ್ರಶ್ನೆ ಮಾಡುತ್ತಾ ಬೀದಿ ಸುತ್ತಿದ ಯುವತಿ..! ಇಲ್ಲಿದೆ ವೈರಲ್ ವಿಡಿಯೋ

ಪ್ರಜ್ವಲ್ ಪ್ರಕರಣ: ಸಂತ್ರಸ್ತೆಯ ಅಪಹರಣ ಕೇಸ್ ನಲ್ಲಿ ಮತ್ತೆ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ..! ಸುಪ್ರಿಂಕೋರ್ಟ್ ನಿಂದ ನೋಟಿಸ್ ಜಾರಿ

ಕಾರ್ಕಳ: ವಿಷ ಸೇವಿಸಿ ಪತ್ರಿಕೋದ್ಯಮ ವಿದ್ಯಾರ್ಥಿ ಆತ್ಮಹತ್ಯೆ