ಕ್ರೈಂವೈರಲ್ ನ್ಯೂಸ್

ಮನೆಯೊಳಗೆ ತಾಯಿ-ಮಕ್ಕಳ ನಿಗೂಢ ಸಾವು..! ಆಕೆಯ ಪತಿ ಬಿಚ್ಚಿಟ್ಟ ರಹಸ್ಯವೇನು..?

243

ನ್ಯೂಸ್ ನಾಟೌಟ್: ಒಂದೇ ಮನೆಯಲ್ಲಿ ತಾಯಿ, ಮಕ್ಕಳು ವಿಷ ಸೇವಿಸಿ ನಿಗೂಢವಾಗಿ ಕೊನೆಯುಸಿರೆಳೆದ ಕರುಣಾಜನಕ ಘಟನೆ ಹಾಸನ ಜಿಲ್ಲೆಯ ದಾಸರಕೊಪ್ಪಲಿನಲ್ಲಿ ನಡೆದ ಘಟನೆ ಮಂಗಳವಾರ(ಜ.2) ಬೆಳಕಿಗೆ ಬಂದಿದೆ.

ಸಿಂಚನ (7), ಪವನ್ (9) ಹಾಗೂ ತಾಯಿ ಶಿವಮ್ಮ ಮೃತರು ಎಂದು ಗುರುತಿಸಲಾಗಿದೆ. ಬಾಗಿಲು ಬಂದ್ ಮಾಡಿ ಗಂಡ ಮನೆಯಲ್ಲಿಲ್ಲದ ವೇಳೆ ಮನೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿ ತಿಳಿಸಿದೆ.

ಮನೆಯಲ್ಲಿದ್ದ ಗ್ಯಾಸ್ ಪೈಪ್ ಕೂಡ ಲಿಕೇಜ್ ಆಗಿತ್ತು ಎಂದು ತಿಳಿದುಬಂದಿದೆ. ಮೂವರು ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕೆಲ ತಿಂಗಳಿಂದ ತುಮಕೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನಿನ್ನೆ ಸಂಜೆವರೆಗೂ ಪತ್ನಿ ಮಕ್ಕಳ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಮದ್ಯಾಹ್ನ 3 ಗಂಟೆಗೆ ತುಮಕೂರಿನಿಂದ ಹೊರಟು ಹಾಸನಕ್ಕೆ ಬಂದೆ. ಮನೆ ತಲುಪ ವೇಳೆಗೆ ಸಂಜೆಯಾಗಿತ್ತು. ಸಂಜೆ 6 ಗಂಟೆ ವೇಳೆಗೆ ಮತ್ತೆ ಫೋನ್ ಮಾಡಿದ್ದೆ. ಫೋನ್ ಸ್ವಿಚ್ ಆಫ್ ಆಗಿತ್ತು. ಮನೆಗೆ ಬಂದು ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ. ಮತ್ತೆ ಮತ್ತೆ ಬಾಗಿಲು ಬಡಿದರೂ ತೆಗೆದಿರಲಿಲ್ಲ. ಹೀಗಾಗಿ ಮನೆ ಬಾಗಿಲಿಗೆ ಬೀಗ ಹಾಕಿದ್ರಿಂದ ಹೊರಗಡೆ ಹೋಗಿರಬಹುದು ಎಂದು ಮನೆಯ ಮೇಲೆ ಮಲಗಿದ್ದೆ. ಬೆಳಗ್ಗೆ ಮನೆಯ ಬಾಗಿಲ ಹೊಸ ಕೀ ಮಾಡಿಸಿ ಬಾಗಿಲು ಓಪನ್ ಮಾಡಿದಾಗ ಮೃತಪಟ್ಟ ವಿಚಾರ ಗೊತ್ತಾಗಿದೆ ಎಂದಿದ್ದಾರೆ.

https://newsnotout.com/2024/01/nursery-and-school-leave-in-up/
See also  ಬಂಟ್ವಾಳ: ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget