ಕ್ರೈಂವೈರಲ್ ನ್ಯೂಸ್

ಮೇಕೆ ಮೇಯಿಸಲು ಹೋಗಿದ್ದ ಅಪ್ರಾಪ್ತೆಗೆ ಗನ್ ತೋರಿಸಿ ಕಾರಿನೊಳಗೆ ಅತ್ಯಾಚಾರ..! ಪ್ರಕರಣ ಮುಚ್ಚಿ ಹಾಕಲು ಪೋಷಕರಿಗೆ ಹಣದ ಆಮಿಷವೊಡ್ಡಿದ ಕುಟುಂಬಸ್ಥರು..!

268

ನ್ಯೂಸ್ ನಾಟೌಟ್: ಇಬ್ಬರು ವ್ಯಕ್ತಿಗಳು ಗನ್ ತೋರಿಸಿ 14 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿರುವ ಘಟನೆ ಪಾಟ್ನಾದಿಂದ ಸುಮಾರು 180 ಕಿಮೀ ದೂರದಲ್ಲಿರುವ ಸಹರ್ಸಾ ಎಂಬಲ್ಲಿ ನಡೆದಿದೆ.

ಶನಿವಾರ ಮಧ್ಯಾಹ್ನ ಮೇಕೆಗಳನ್ನು ಮೇಯಿಸಲು ಬಾಲಕಿ ಹೋಗಿದ್ದಳು. ಬಳಿಕ ಅವಳು ಮನೆಗೆ ಹಿಂದಿರುಗುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಆಕೆಯನ್ನು ಕರೆದಿದ್ದಾರೆ. ಬಳಿಕ ಅವರಲ್ಲಿ ಓರ್ವ ಆಕೆಯ ತಲೆಗೆ ಗನ್ ಹಿಡಿದು ಕಾರಿನೊಳಗೆ ಹತ್ತಿಸಿಕೊಂಡಿದ್ದಾನೆ. ಬಳಿಕ ಆಕೆಯ ಮೇಲೆ ಇಬ್ಬರು 2 ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಬಾಲಕಿಯ ಕಿರುಚಾಟ ಕೇಳಿಸದಂತೆ ಹಾಡನ್ನು ಹೆಚ್ಚಿನ ಸೌಂಡ್‍ನಲ್ಲಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ಬಂದ ಬಳಿಕ ವಿಷಯವನ್ನು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳ ಕುಟುಂಬದವರು ತಮಗೆ ಹಣ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಬಾಲಕಿಯ ಚಿಕ್ಕಮ್ಮ ತಿಳಿಸಿದ್ದಾರೆ. ಆರೋಪಿಗಳು ಎಷ್ಟು ಹಣ ನೀಡುತ್ತಾರೆ? ನನಗೆ ಅದು ಬೇಡ, ನನಗೆ ನ್ಯಾಯ ಬೇಕು ಎಂದು ಬಾಲಕಿಯ ತಂದೆ ಹೇಳಿಕೊಂಡಿದ್ದಾರೆ.
ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಬಿಟ್ಟು ಮತ್ತು ಅಂಕುಶ್ ಎಂದು ಗುರುತಿಸಲಾಗಿದೆ.

Click

https://newsnotout.com/2024/09/kannada-news-indiara-canteen-in-cremation-place-of-hindus-hubballi/
See also  ಐವರ್ನಾಡು: ಹಠಾತ್ ಕಾಡು ಹಂದಿ ಅಡ್ಡ ಬಂದು ಬೈಕ್ ಪಲ್ಟಿ..! ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯ, ನಿನ್ನೆ ರಾತ್ರಿ ನಡೆದಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget