ಕ್ರೈಂರಾಜ್ಯವೈರಲ್ ನ್ಯೂಸ್

ಕುಡಿದ ನಶೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯನ ರಂಪಾಟ..! ಆಸ್ಪತ್ರೆಯ ಕಿಟಕಿ ಗಾಜು, ಟೇಬಲ್, ಕುರ್ಚಿಗಳೆಲ್ಲ ಪುಡಿಪುಡಿ..!

229

ನ್ಯೂಸ್‌ ನಾಟೌಟ್‌: ಕುಡಿದ ನಶೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯನೊಬ್ಬ ರಂಪಾಟ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರನಾಳ ಆಯುಷ್ ಆರೋಗ್ಯ ಮಂದಿರದಲ್ಲಿ ನಡೆದಿದೆ.

ಶಿರನಾಳ ಗ್ರಾಮದ ಆಯುಷ್ ಆರೋಗ್ಯ ಮಂದಿರದಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್‌ ಆಫೀಸರ್ ಹುದ್ದೆಯಲ್ಲಿರುವ ನಾರಾಯಣ ರಾಠೋಡ ಕುಡಿದ ನಶೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದಾನೆ. ಆಸ್ಪತ್ರೆಯ ಕಿಟಕಿ ಗಾಜು ಪುಡಿ ಪುಡಿ ಮಾಡಿ ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯ ಟೇಬಲ್, ಕುರ್ಚಿಗಳೆಲ್ಲ ಪುಡಿಪುಡಿಯಾಗಿವೆ. ಅಷ್ಟಲ್ಲದೇ ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ಕೂಡ ನೀಡಿದ್ದಾನೆ. ವೈದ್ಯನ ಅವತಾರ ಕಂಡು ಗ್ರಾಮದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಡಿತದ ಕಾರಣದಿಂದ ಮೂರು ತಿಂಗಳ ಹಿಂದೆ ನಾರಾಯಣ ರಾಠೋಡನನ್ನ ಅಮಾನತ್ತು ಮಾಡಲಾಗಿತ್ತು. ಬರಡೋಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದಾಗ ಮಹಿಳಾ ರೋಗಿಗಳು ಬಂದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದ ಹಿನ್ನೆಲೆ ಅಮಾನತ್ತು ಮಾಡಲಾಗಿತ್ತು.
ವಾರದ ಹಿಂದಷ್ಟೇ ಮತ್ತೇ ಕರ್ತವ್ಯಕ್ಕೆ ಹಾಜರಾಗಿದ್ದ ವೈದ್ಯ ಇದೀಗ ಮತ್ತೆ ಅದೇ ರೀತಿ ರಂಪಾಟ ಮಾಡಿದ್ದಾನೆ.

Click

https://newsnotout.com/2024/09/hindu-muslim-blood-donation-issue-by-doctor-kannada-news/
https://newsnotout.com/2024/09/govt-school-kannada-news-drunk-by-girls-inside-the-school-video-viral/
https://newsnotout.com/2024/09/darshan-thugudeepa-charge-sheet-kannada-news-highcourt-kannada-news/
https://newsnotout.com/2024/09/kananda-news-viral-news-video-cctv-fixed-on-the-doubter-head/
See also  ನವಜಾತ ಶಿಶುವಿನ ಮೇಲೆ ಕಾಲಿಟ್ಟ ಪೊಲೀಸ್! ಇಲ್ಲಿದೆ 4 ದಿನದ ಮಗುವಿನ ಸಾವಿನ ರೋಚಕ ಹಿನ್ನೆಲೆ !
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget