ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಖ್ಯಾತನಟಿ ಕೀರ್ತಿ ಸುರೇಶ್ ಗೆ ಕಂಕಣ ಭಾಗ್ಯ, 15 ವರ್ಷಗಳ ಪ್ರೀತಿ, ವಿವಾಹಕ್ಕೆ ಸಿದ್ಧತೆ

246

ನ್ಯೂಸ್‌ ನಾಟೌಟ್‌: ನಿರ್ಮಾಪಕ ಸುರೇಶ್ ಮೆನನ್ – ನಟಿ ಮೇನಕಾ ದಂಪತಿಯ ಪುತ್ರಿ ಕೀರ್ತಿ ಸುರೇಶ್, ಗೀತಾಂಜಲಿ ಎನ್ನುವ ಮಲೆಯಾಳಂ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ತಮಿಳಿನ ಖ್ಯಾತನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ನಂತರ ಧನುಷ್ ಜೊತೆಗೆ ತೊಡರಿ, ಶಿವಕಾರ್ತಿಕೇಯನ್ ಜೊತೆ ರಜನಿಮುರುಗನ್, ರೆಮೋ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಈಗ ಕೀರ್ತಿ ಸುರೇಶ್ ಪ್ರೇಮ ವಿವಾಹ ಆಗುತ್ತಿದ್ದಾರೆ ಎನ್ನಲಾಗಿದೆ.
ಕಡಿಮೆ ಅವಧಿಯಲ್ಲಿಯೇ ಮುಂಚೂಣಿಯ ನಟಿಯಾಗಿ ಬೆಳೆದ ಅವರು ವಿಜಯ್ ಜೊತೆಗೆ ಭೈರವ, ಸರ್ಕಾರ್ ಚಿತ್ರಗಳಲ್ಲಿ ನಟಿಸಿ ಮಹಾನಟಿಯಾದರು. ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯೂ ಈಕೆ ಪಡೆದುಕೊಂಡಿದ್ದಾರೆ.

ಬೇಬಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ ಗೂ ಪಾದಾರ್ಪಣೆ ಮಾಡಲಿದ್ದಾರೆ. ವರುಣ್ ಧವನ್ ಜೊತೆಗೆ ನಟಿಸಿದ್ದಾರೆ. ಕೀರ್ತಿ ಸುರೇಶ್ ಹಲವು ಪ್ರೇಮ ವಿವಾದಗಳಲ್ಲಿ ಸಿಲುಕಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ ಜೊತೆಗಿನ ಫೋಟೋದಿಂದಾಗಿ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಕೀರ್ತಿ ಕುಟುಂಬದವರು ಇದನ್ನು ನಿರಾಕರಿಸಿದರು.

ಕೀರ್ತಿ ಸುರೇಶ್ ವಿವಾಹದ ಸಿದ್ಧತೆಗಳು ಸದ್ದಿಲ್ಲದೆ ನಡೆಯುತ್ತಿವೆ. ಡಿಸೆಂಬರ್ 12 ರಂದು ಕೀರ್ತಿಯವರ ವಿವಾಹ ನಡೆಯಲಿದೆ. 15 ವರ್ಷಗಳಿಂದ ಪ್ರೀತಿಸುತ್ತಿರುವ ಆಂಟನಿ ಥಟ್ಟಿಲ್ ಅವರನ್ನು ಮದುವೆಯಾಗಲಿದ್ದಾರೆ ಎಂದು ವರದಿ ತಿಳಿಸಿದೆ. ಗೋವಾದಲ್ಲಿ ವಿವಾಹ ನಡೆಯಲಿದೆ. ಆಂಟನಿ ಉದ್ಯಮಿ ಎನ್ನಲಾಗಿದೆ.

Click

https://newsnotout.com/2024/11/tirupati-tirumala-hindu-temple-kannada-news-1000-above-workers-other-relegious/
https://newsnotout.com/2024/11/75-year-old-lady-r-by-begging-man-kannada-news-d-viral-news-d/
https://newsnotout.com/2024/11/elon-musk-kannada-news-space-x-kannada-news-isro-issue-d/
See also  ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು..? ಆಂಧ್ರ ಮುಖ್ಯಮಂತ್ರಿ ಈ ಬಗ್ಗೆ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget