ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಆನೆ ದಂತ ಸಾಗಿಸುತ್ತಿದ್ದ ಫಾರೆಸ್ಟ್ ವಾಚರ್ ಹಾಗೂ ಆತನ ಸಂಬಂಧಿ..! ಇಬ್ಬರು ಅರೆಸ್ಟ್

ನ್ಯೂಸ್ ನಾಟೌಟ್: ಕಾಡು ರಕ್ಷಕರಿಂದಲೇ ಆನೆ ದಂತ ಸಾಗಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಆನೆ ದಂತ ಸಾಗಿಸುತ್ತಿದ್ದ ಫಾರೆಸ್ಟ್ ವಾಚರ್ ಹಾಗೂ ಆತನ ಸಂಬಂಧಿಯನ್ನು ಬಂಧಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮೋಳೆ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಅರಣ್ಯ ವೀಕ್ಷಕರೊಬ್ಬರು ತನ್ನ ಸಂಬಂಧಿಕರೊಂದಿಗೆ ಆನೆ ದಂತ ಸಾಗಿಸುತ್ತಿದ್ದ. ಆನೆ ದಂತ ಸಾಗಿಸುತ್ತಿದ್ದ ವೇಳೆ ಸಂಚಾರಿ ಅರಣ್ಯ ದಳ ಕಾರ್ಯಾಚರಣೆ ನಡೆಸಿದೆ.

ಬೈಕ್‌ ನಲ್ಲಿ ಆನೆ ದಂತ ಸಾಗಿಸುತ್ತಿದ್ದ ವೇಳೆ ಮಾಲು ಸಮೇತ ಕದೀಮರು ಸಿಕ್ಕಿಬಿದ್ದಿದ್ದಾರೆ. ವಾಚರ್ ಚಂದ್ರಶೇಖರ್ ಹಾಗೂ ಬಸವರಾಜ್ ಬಂಧನವಾಗಿದೆ. ಮತ್ತೊಬ್ಬ ಆರೋಪಿ ಪುಟ್ಟಸ್ವಾಮಿ ಪರಾರಿಯಾಗಿದ್ದಾನೆ. ಅರಣ್ಯ ಸಂಚಾರಿ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸಿಟಿ ರವಿ ಅವಾಚ್ಯ ಶಬ್ದ ಬಳಸಿರುವುದು ಫೋರೆನ್ಸಿಕ್ ಪರೀಕ್ಷೆಯಲ್ಲಿ ದೃಢ, ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಏನಿದೆ..?

ಅತಿಥಿಯಂತೆ ಬಂದ ವಧುವಿನ ಮಾಜಿ ಪ್ರಿಯಕರನಿಂದ ವರನಿಗೆ ಥಳಿತ..! ಇಲ್ಲಿದೆ ವೈರಲ್ ವಿಡಿಯೋ

ಒಂದೇ ಜಿಲ್ಲೆಯಲ್ಲಿ 1 ಕೋಟಿಗೂ ಅಧಿಕ ಹಣ ಜಪ್ತಿ..! ಚುನಾವಣಾ ಆಯೋಗದ ಭರ್ಜರಿ ಬೇಟೆ