ಉಡುಪಿಉಡುಪಿಕರಾವಳಿದಕ್ಷಿಣ ಕನ್ನಡಮಂಗಳೂರು

ಕರಾವಳಿ: ಮೇ.22 ವರೆಗೆ ಮೀನುಗಾರಿಕೆ ತೆರಳದಂತೆ ಜಿಲ್ಲಾಡಳಿತ ಖಡಕ್ ಸೂಚನೆ..! ಜಿಲ್ಲಾಡಳಿತ ಹೇಳಿದ್ದೇನು..?

ನ್ಯೂಸ್ ನಾಟೌಟ್: ಮೇ 22 ರ ವರೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಮೀನುಗಾರರಿಗೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

ಐದು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ 40 ಕಿ.ಮೀನಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಜಿಲ್ಲೆಯ ಬಂದರಿನಲ್ಲಿ ಬೋಟುಗಳು ಲಂಗುರು ಹಾಕುತ್ತಿವೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಬಳಿಯ ಕಾಳಿ ನದಿ ಸಮುದ್ರಕ್ಕೆ ಸಂಗಮ ಆಗುವ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ. ಸಮುದ್ರದ ಮಧ್ಯದಲ್ಲಿ ದೋಣಿ ಮೂಲಕ ತೆರಳಿ ಹೋಮ್ ಹಾಕಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಆದರೆ ಈಗ ಮಳೆಯ ಜೊತೆ ವಾಯುಭಾರ ಕುಸಿತದ ಭೀತಿಯಿಂದ ಮೀನುಗಾರಿಕೆ ಸ್ಥಗಿತವಾಗಿದೆ.

Click 👇

https://newsnotout.com/2024/05/hotel-issue-boyfriend-and-issue
https://newsnotout.com/2024/05/mobile-phone-and-minor-brothers-issue
https://newsnotout.com/2024/05/janhvi-kapoor-at-her-12-years-of-age

Related posts

ಕುಕ್ಕರ್‌ ಬಾಂಬ್‌ ಸ್ಫೋಟದ ಸಂತ್ರಸ್ತನಿಗೆ ಸುಂದರ ಮನೆ ನಿರ್ಮಾಣ

ನಾಪತ್ತೆಯಾಗಿ 20 ದಿನಗಳಾದರೂ ಸಿಕ್ಕಿಲ್ಲ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯೆ

ನಟಿ ಪೂಜಾ ಹೆಗ್ಡೆ ಮದುವೆಯಂತೆ..? ಕರಾವಳಿ ಕುವರಿ ಮನ ಗೆದ್ದ ಯಾರು ಆ ಖ್ಯಾತ ಕ್ರಿಕೆಟಿಗ?