ಕ್ರೈಂವೈರಲ್ ನ್ಯೂಸ್

ಮಗಳು ಕಪ್ಪಗಿದ್ದಾಳೆ ಎಂದು ವಿಷ ಕುಡಿಸಿದ ತಂದೆ..!18 ತಿಂಗಳ ಮಗುವನ್ನು ಕೊಂದ ಕ್ರೂರಿ..!

258

ನ್ಯೂಸ್ ನಾಟೌಟ್: 18 ತಿಂಗಳ ಹೆಣ್ಣು ಮಗು ತನ್ನ ತಂದೆಯ ಕ್ರೌರ್ಯಕ್ಕೆ ಬಲಿಯಾಗಿದೆ. ಮಗು ಕಪ್ಪಗಿದೆ ಎಂದು ವಿಷ ನೀಡಿ ಸಾಯಿಸಿದ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಮಗುವನ್ನು ಹತ್ಯೆ ಮಾಡಿ, ಪತ್ನಿಗೂ ಕಿರುಕುಳ ನೀಡಿ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದ್ದು.

ಯಾರೂ ಕೇಳಿದರೂ ಆರೋಗ್ಯ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಹೇಳಬೇಕೆಂದು ಗದರಿಸಿ ಘಟನೆಯನ್ನೇ ಮುಚ್ಚಿಡುವ ಪ್ರಯತ್ನವನ್ನೂ ಮಾಡಿದ್ದ. ಆದರೆ ಪತ್ನಿಯ ತಾಯಿ ಅನುಮಾನಗೊಂಡ ಕಾರಣ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. . ಪೆಟ್ಟಸನ್ನೆಗಂಡ್ಲ ಗ್ರಾಮದ ಮಹೇಶ್ ಎಂಬ ಆರೋಪಿ ಪಕ್ಕದ ಊರಿನ ಶ್ರಾವಣಿಯನ್ನು ಮದುವೆಯಾಗಿದ್ದ. ಇವರಿಗೆ ಮುದ್ದಾದ ಹೆಣ್ಣು ಮಗು ಜನಸಿತ್ತು. ಆದರೆ ಬಣ್ಣ ಕಪ್ಪು ಎಂದು ಮಹೇಶ್ ಹಾಗೂ ಆತನ ಮನೆಯವರು ಕಿರಕುಳ ಆರಂಭಿಸಿದ್ದರು. ಇದೇ ಕಾರಣದಿಂದ ಪತ್ನಿಯನ್ನು ಅನುಮಾನದಿಂದ ನೋಡುತ್ತಿದ್ದ ಎನ್ನಲಾಗಿದೆ.

ಎಲ್ಲವನ್ನೂ ಸಹಿಸಿಕೊಂಡು ಮಗುವಿನಲ್ಲಿ ನಗು ನೋಡುತ್ತಿದ್ದ ತಾಯಿ ಶ್ರಾವಣಿಯನ್ನು ಕೋಣೆಯಲ್ಲಿ ಲಾಕ್ ಮಾಡಿ ಮಗುವನ್ನು ಸಾಯಿಸುವ ಪ್ರಯತ್ನವನ್ನೂ ಈತ ಮಾಡಿದ್ದ. ಆದರೆ ಫಲಪ್ರದವಾಗಿರಲಿಲ್ಲ. ಮಗುವನ್ನು ಎಸೆಯುವ ಪ್ರಯತ್ನವನ್ನೂ ಮಾಡಿ ಕೈಬಿಟ್ಟಿದ್ದ. ಆದರೆ ಮಾರ್ಚ್ 31ರಂದು ಶ್ರಾವಣಿ ಕೆಲಸದಲ್ಲಿ ಮಗ್ನರಾಗಿದ್ದ ವೇಳೆ ಮಗುವಿಗೆ ವಿಷ ಕುಡಿಸಿದ್ದಾನೆ ಎನ್ನಲಾಗಿದೆ. ಶ್ರಾವಣಿ ಕೆಲಸ ಮುಗಿಸಿ ಬರುವಷ್ಟರೊಳಗೆ ಮಗುವಿನ ಮೂಗಿನಲ್ಲಿ ರಕ್ತ ಸೋರಿಕೆಯಾಗುತ್ತಿರುವುದು ಗಮನಿಸಿದ್ದಾಳೆ. ಮಗು ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು.

ಇತ್ತ ಮಹೇಶ ಮನೆಯಿಂದ ಕಾಲ್ಕಿತ್ತಿದ್ದ. ತಕ್ಷಣವೇ ಮಗುವನ್ನು ಎತ್ತಿಕೊಂಡು ಹತ್ತಿದರ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಧಾವಿಸಿದ್ದಾಳೆ. ಈ ವೇಳೆ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾಟಕವಾಡಿದ ಮಹೇಶ ಆಸ್ಪತ್ರೆಗೆ ಆಗಮಿಸಿ ತರಾತುರಿಯಲ್ಲಿ ಮಗುವನ್ನು ಪಡೆದು ಮನೆಗೆ ಮರಳಿ ಅಂತ್ಯಸಂಸ್ಕಾರ ನಡೆಸಿದ್ದಾನೆ. ಇಷ್ಟೇ ಮಗು ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ಹೇಳುವಂತೆ ಗದರಿಸಿದ್ದಾನೆ. ಆದರೆ ಶ್ರಾವಣಿ ತಾಯಿ ಅನುಮಾನಗೊಂಡಿದ್ದಾರೆ. ಹೀಗಾಗಿ ಪಂಚಾಯತ್‌ನಲ್ಲಿ ಈ ಕುರಿತ ಮಾಹಿತಿ ನೀಡಿದ್ದಾಳೆ.ಪೊಲೀಸರು ಆಗಮಿಸಿದಾಗ ಶ್ರಾವಣಿ ನಡೆದ ಘಟನೆ ವಿವರಿಸಿದ್ದಾಳೆ. ಮಹೇಶನ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇತ್ತ ಹೂತಿದ್ದ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

See also  ಸಲ್ಮಾನ್ ಖಾನ್‌ ಗೆ ಜೀವ ಬೆದರಿಕೆ ಹಾಕಿದ್ದ ರಾಯಚೂರಿನ ಯುವಕನ ಬಡ ಪೋಷಕರಿಗೆ ಸಂಕಷ್ಟ..! ಮುಂಬೈಗೆ ಬರುವಂತೆ ಪೋಷಕರಿಗೆ ಪೊಲೀಸರಿಂದ ಕರೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget