Latestಕ್ರೈಂದೇಶ-ವಿದೇಶ

ಚಲಿಸುತ್ತಿರುವಾಗಲೇ ಇಬ್ಭಾಗವಾದ​ ಎಕ್ಸ್ ​ಪ್ರೆಸ್​ ರೈಲು..! ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ..!

296
Spread the love

ನ್ಯೂಸ್ ನಾಟೌಟ್: ಚಲಿಸುತ್ತಿರುವಾಗಲೇ ರೈಲು ಇಬ್ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ಇಂದು(ಮಾ.4) ಮುಂಜಾನೆ ನಡೆದಿದೆ. ದೀನ್ ದಯಾಳ್ ಜಂಕ್ಷನ್ ಬಳಿ ಸಂಭವಿಸಬಹುದಾದ ದೊಡ್ಡ ಅಪಾಯವೊಂದು ತಪ್ಪಿದೆ.

ಜಂಕ್ಷನ್‌ನಿಂದ ಹೊರಟ ರೈಲು ಸ್ವಲ್ಪ ದೂರ ಹೋದ ನಂತರ ಎರಡು ಭಾಗಗಳಾಗಿ ವಿಭಜನೆಯಾಗಿದೆ. ಕಪ್ಲಿಂಗ್ ಮುರಿದುಹೋದ ಕಾರಣ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ರೈಲು ದೆಹಲಿಯ ಆನಂದ್ ವಿಹಾರ್ ನಿಂದ ಒಡಿಶಾದ ಪುರಿಗೆ ಹೋಗುತ್ತಿತ್ತು.

ಈ ಮಧ್ಯೆ, 12876 ನಂದನ್ ಕಾನನ್ ಎಕ್ಸ್‌ ಪ್ರೆಸ್ ರೈಲಿನ ಸ್ಲೀಪರ್ ಎಸ್ 4 ಬೋಗಿಯ ಜೋಡಣೆಯ ಕೊಂಡಿ ಮುರಿದು ಬಿದ್ದಿದೆ. ಜೋಡಣೆಯಲ್ಲಿ ಬಿರುಕು ಬಿಟ್ಟ ಕಾರಣ ರೈಲು ಎರಡು ಭಾಗವಾಗಿ ಬೋಗಿಗಳು ಬೇರ್ಪಟ್ಟಿವೆ. ಈ ಸಮಯದಲ್ಲಿ, ರೈಲಿನೊಳಗೆ ಕುಳಿತಿದ್ದ ಪ್ರಯಾಣಿಕರು ಆತಂಕಗೊಂಡಿದ್ದು, ರೈಲು ಆಗಷ್ಟೇ ಹೊರಡುತ್ತಿದ್ದ ಕಾರಣ ದೊಡ್ಡ ಅಪಾಯ ತಪ್ಪಿದೆ.

See also  ಸುಳ್ಯ :ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲಾ ವಿಸ್ತೃತ ಕಟ್ಟಡ ಉದ್ಘಾಟನಾ ಸಮಾರಂಭ,ಮಾಜಿ ಮುಖ್ಯ ಮಂತ್ರಿ ಡಿ.ವಿ.ಎಸ್‌, ಧರ್ಮಪಾಲನಾಥ ಸ್ವಾಮೀಜಿ ಸಹಿತ ಗಣ್ಯರು ಭಾಗಿ
  Ad Widget   Ad Widget   Ad Widget   Ad Widget