ಕ್ರೈಂವೈರಲ್ ನ್ಯೂಸ್

ಇವಿಎಂ ಕುರಿತ ವಿಡಿಯೋ ಮಾಡಿದ್ದ ಯೂಟ್ಯೂಬರ್‌ ಗಳಿಗೆ ನಿರ್ಬಂಧ..! ಇಲ್ಲಿದೆ ಸಂಪೂರ್ಣ ಮಾಹಿತಿ

246

ನ್ಯೂಸ್ ನಾಟೌಟ್: ತಿಂಗಳುಗಳ ಹಿಂದೆ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ದಕ್ಷತೆ ಕುರಿತು ಮಾಡಲಾಗಿರುವ ವಿಡಿಯೊಗಳ ಕೆಳಗೆ ಹೆಚ್ಚುವರಿ ವಿವರಣೆಯನ್ನು ಸೇರ್ಪಡೆ ಮಾಡಲು ಪ್ರಾರಂಭಿಸಿದ್ದ ಯೂಟ್ಯೂಬ್, ಅಂತಹ ವಿಡಿಯೊಗಳ ಮಾನಿಟೈಸೇಷನ್ ಗೂ ನಿರ್ಬಂಧ ವಿಧಿಸಲು ಪ್ರಾರಂಭಿಸಿದೆ. ಅದರರ್ಥ, ಅಂತಹ ವಿಡಿಯೊಗಳು ಜಾಹೀರಾತು ಆದಾಯಕ್ಕೆ ಮಾನ್ಯತೆ ಹೊಂದಿರುವುದಿಲ್ಲ ಎಂದು ಹೇಳಲಾಗಿದೆ.

ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳಿಗೆ ಸಂಬಂಧಿಸಿದ ವಿಡಿಯೊಗಳಿಗೆ ವಿಧಿಸಲಾಗಿರುವ ಮಾನ್ಯತೆಯ ಮಿತಿಯ ಕುರಿತು ಮೇಘ್ ನಾದ್ ಹಾಗೂ ಸ್ವತಂತ್ರ ಪತ್ರಕರ್ತ ಸೋಹಿತ್ ಮಿಶ್ರಾ ಸೇರಿದಂತೆ ಕನಿಷ್ಠ ಪಕ್ಷ ಇಬ್ಬರು ಕ್ರಿಯೇಟರ್ ಗಳಿಗೆ ಇತ್ತೀಚೆಗೆ ಯೂಟ್ಯೂಬ್ ಎಚ್ಚರಿಕೆ ರವಾನಿಸಿದೆ. ತನ್ನ ಈ ನಿರ್ಧಾರಕ್ಕೆ ಜಾಹೀರಾತುದಾರ ಸ್ನೇಹಿ ಮಾರ್ಗಸೂಚಿಯನ್ನು ಉಲ್ಲೇಖಿಸಿರುವುದು ಕಾರಣ ಎಂದು ಹೇಳಿರುವ ಈ ಆನ್ ಲೈನ್ ವೇದಿಕೆಯು, ತಪ್ಪು ಮಾಹಿತಿಯನ್ನು ಒಳಗೊಂಡಿರುವ ವಿಡಿಯೊಗಳು ಜಾಹೀರಾತು ಆದಾಯವನ್ನು ಪಡೆಯಲು ಅರ್ಹವಾಗಿರುವುದಿಲ್ಲ ಎಂದು ಹೇಳಿದೆ.

ಮಿಶ್ರಾರ ಸೋಹಿತ್ ಮಿಶ್ರಾ ಅಫಿಷಿಯಲ್ ಯೂಟ್ಯೂಬ್ ವಾಹಿನಿಯು 3.68 ಲಕ್ಷ ಚಂದಾದಾರರನ್ನು ಹೊಂದಿದ್ದರೆ, ಮೇಘ್ ನಾದ್ ರ ವಾಹಿನಿಯು ಸುಮಾರು 42,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಈ ಕುರಿತು The Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಮಿಶ್ರಾ, ಇವಿಎಂಗೆ ಸಂಬಂಧಿಸಿದ ನನ್ನ ವಿಡಿಯೊಗಳನ್ನು ‌ʼಲಿಮಿಟೆಡ್ ಮಾನಿಟೈಸೇಷನ್ʼ ಅಡಿ ಇರಿಸಲಾಗಿದೆ. ಇವುಗಳ ಪೈಕಿ ಒಂದೇ ಒಂದು ವಿಡಿಯೊದ ʼಮಾನಿಟೈಸೇಷನ್ʼ ಅನ್ನು ನನ್ನ ಮರುಪರಿಶೀಲನಾ ಮನವಿಯ ಮೇರೆಗೆ ಮರು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ಮೇಘ್ ನಾದ್ ರ ನಾಲ್ಕು ನೇರ ಪ್ರಸಾರದಿಂದ ಸಂಗ್ರಹವಾಗಿದ್ದ ಜಾಹೀರಾತು ಆದಾಯದ ಮೇಲೆಯೂ ಯೂಟ್ಯೂಬ್ ನಿರ್ಬಂಧ ವಿಧಿಸಿದೆ. ಎರಡರಿಂದ ಮೂರು ಗಂಟೆಗಳ ಕಾಲ ಸುದೀರ್ಘವಾಗಿದ್ದ ಈ ವಿಡಿಯೊಗಳಲ್ಲಿ ಇವಿಎಂ ಕುರಿತ ಪ್ರಶ್ನೆಗಳನ್ನು ಒಳಗೊಂಡಿದೆ. ಆದರೆ, ಯೂಟ್ಯೂಬ್ ಪ್ರಕಾರ, ಜಾಹೀರಾತುದಾರರ ಮಾರ್ಗಸೂಚಿಯನ್ನು ಉಲ್ಲಂಘಿಸಿರುವ ನೆಲೆಯಲ್ಲಿ ಮಿಶ್ರಾ ಹಾಗೂ ಮೇಘ್ ನಾದ್ ರ ವಿಡಿಯೊಗಳ ಜಾಹೀರಾತುಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ.

See also  ಕಾಪಿರೈಟ್ ಪ್ರಕರಣದಲ್ಲಿ ಲೇಡಿ ಸೂಪರ್ ಸ್ಟಾರ್ ಗೆ ಹಿನ್ನಡೆ..! ನಟ ಧನುಷ್ ಮತ್ತು ನಟಿ ನಯನತಾರಾ ನಡುವಿನ ಹಗ್ಗಜಗ್ಗಾಟಕ್ಕೆ ಮದ್ರಾಸ್ ಹೈಕೋರ್ಟ್ ನಿಂದ ಪೂರ್ಣವಿರಾಮ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget