ಕ್ರೈಂವೈರಲ್ ನ್ಯೂಸ್ಸಿನಿಮಾ

ನಡುರಾತ್ರಿ ಪದೇ ಪದೇ ‘ಡಿ ಬಾಸ್’ಎಂದು ಕೂಗಿ ಕಿರಿಕಿರಿ ಮಾಡಿದ್ದನ್ನು ಪ್ರಶ್ನಿಸಿದ ಸ್ನೇಹಿತ..! ಗೆಳೆಯನ ಕತ್ತು ಸೀಳಿ ಪರಾರಿಯಾದ ದರ್ಶನ್ ಅಭಿಮಾನಿಗಳು..!

241

ನ್ಯೂಸ್ ನಾಟೌಟ್: ರಾತ್ರಿ ಮಲಗಿದ್ದಾಗ ಪದೇ ಪದೇ ಡಿ ಬಾಸ್ ಎಂದು ಕೂಗುತ್ತಿದ್ದುದನ್ನು ಕಿರಿಕಿರಿಯಾಗಿ ಮತ್ತೊಬ್ಬ ಯುವಕ ವಿರೋಧಿಸಿದ್ದಕ್ಕೆ, ಇಬ್ಬರು ಯುವಕರು ತಮ್ಮ ಸ್ನೇಹಿತನ ಕತ್ತನ್ನು ಬ್ಲೇಡ್‌ನಿಂದ ಕೊಯ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಳಿಕೆರೆಯಲ್ಲಿ ನಡೆದಿದೆ.

ಗಾಯಗೊಂಡವನನ್ನು ವೆಂಕಟೇಶ್ ಸ್ವಾಮಿ (26) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮಹದೇವ್ ಮತ್ತು ಕಿರಣ್ ತಲೆಮರೆಸಿಕೊಂಡಿದ್ದಾರೆ. ಮೂವರು ಸ್ನೇಹಿತರು ಕಟ್ಟಡ ಕಾರ್ಮಿಕರಾಗಿದ್ದಾರೆ. ರಾಮನಗರ ಮೂಲದ ಇವರು ಸುಳ್ಳಿಕೆರೆಯ ಕಟ್ಟಡ ನಿರ್ಮಾಣ ಸ್ಥಳದಲ್ಲಿರುವ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದಾರೆ.

ಕಳೆದ ಗುರುವಾರ ರಾತ್ರಿ ವೆಂಕಟೇಶ್ ಸ್ವಾಮಿ ಮಲಗಿದ್ದ, ಮಹದೇವ್ ಮತ್ತು ಕಿರಣ್ ಮದ್ಯ ಸೇವಿಸಿದ್ದರು. ಈ ವೇಳೆ ಇಬ್ಬರು ನಟ ದರ್ಶನ್ ಬಗ್ಗೆ ಜೋರಾಗಿ ಮಾತನಾಡುತ್ತಾ, “ಡಿ ಬಾಸ್” “ಡಿ ಬಾಸ್” ಎಂದು ಕೂಗಲು ಪ್ರಾರಂಭಿಸಿದರು.

ಇದರಿಂದ ಕಿರಿಕಿರಿಯಾಗಿ ವಿಚಲಿತರಾದ ವೆಂಕಟೇಶ್ ಸ್ವಾಮಿ ಅವರಿಗೆ ಹೊಡೆದು ಸುಮ್ಮನಿರುವಂತೆ ಹೇಳಿದರೂ ಅವರು ಕೇಳೋದಿಲ್ಲ. ನಟ ದರ್ಶನ್ ನಿಮಗೆ ಏನಾದರೂ ಸಹಾಯ ಮಾಡುತ್ತಿದ್ದಾರೆ, ನಿಮ್ಮ ಅಗತ್ಯಗಳನ್ನು ಪೂರೈಸುತ್ತಿದ್ದಾರೆಯೇ ಎಂದು ಕೇಳಿದ್ದಾರೆ, ಆದರೆ ಇಬ್ಬರು ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ, ಹೀಗಾಗಿ ಸ್ವಾಮಿ ಅವರಿಗೆ ಮತ್ತೆ ಹೊಡೆಯಲು ಯತ್ನಿಸಿದಾಗ ಕಿರಣ್ ಬ್ಲೇಡ್‌ ನಿಂದ ಕುತ್ತಿಗೆ ಕೊಯ್ದುದಿದ್ದಾನೆ, ನಂತರ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ. ಸ್ವಾಮಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Click

https://newsnotout.com/2024/09/sameer-acharya-kananda-news-police-case-kannada-news/
https://newsnotout.com/2024/09/mallikarjun-karge-and-narendra-modi-viral-news-health-kannada-news/
https://newsnotout.com/2024/09/kasaragod-kannada-news-nomore-baby-kasaragod-case-kannada-news/
https://newsnotout.com/2024/09/ksrtc-and-container-collision-mandya-kannada-news-viral-video/
See also  ಮೋಸ್ಟ್‌ ವಾಂಟೆಡ್‌ ಕಳ್ಳ ಹೆಡ್ ಕಾನ್ಸ್ಟೇಬಲ್ ಮಗಳನ್ನೇ ಮದುವೆಯಾದ..! ಜೈಲಿನಲ್ಲೇ ನಕಲಿ ಕೀ ತಯಾರಿಕೆ ಕಲಿತಿದ್ದ ಈ ಕಳ್ಳ ಯಾರು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget