ದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಹುಲ್ಲು ಮೇಯುತ್ತಿದ್ದ ವೇಳೆ ಹೆಡೆಯೆತ್ತಿ ನಿಂತ ನಾಗರ ಹಾವನ್ನು ಮುದ್ದಾಡಿದ ಹಸು..! ಇಲ್ಲಿದೆ ಅಪರೂಪದ ವಿಡಿಯೋ

249

ನ್ಯೂಸ್ ನಾಟೌಟ್ :ತೋಟದಲ್ಲಿ ಹುಲ್ಲು ಮೇಯುತ್ತಿದ್ದ ಹಸುವಿನ ಎದುರು ನಾಗರ ಹಾವು ಹೆಡೆಯೆತ್ತಿ ನಿಂತಿದೆ. ಆದರೂ ಭಯ ಪಡದ ಹಸು ಹೆಡೆಯೆತ್ತಿದ ನಾಗರ ಹಾವಿನ ಮೇಲೆ ಪ್ರೀತಿಯಿಂದ ನಾಲಿಗೆಯಿಂದ ಸವರಿ ಮಮಕಾರ ತೋರಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಹಾವಿನ ಪ್ರತಿಕ್ರಿಯೆಯೂ ಅಪರೂಪದ್ದಾಗಿದ್ದು, ಹಸುವಿಗೆ ಕಚ್ಚದೆ ತಾಳ್ಮೆಯಿಂದ ವರ್ತಿಸಿದೆ.

ಅಕ್ಟೋಬರ್ 10, 2024 ರಂದು ‘ಮಾಸ್ಸಿಮೊ’ ಎಕ್ಸ್ ಖಾತೆಯಿಂದ (ಹಿಂದಿನ ಟ್ವಿಟರ್) ಅಪ್‌ಲೋಡ್ ಮಾಡಿದ ವೀಡಿಯೊ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ಹಸು ನಾಗರಹಾವನ್ನು ಪದೇ ಪದೇ ನೆಕ್ಕುವ ಮೂಲಕ ತನ್ನ ಪ್ರೀತಿಯನ್ನು ತೋರಿಸಿದೆ. ಹಾಗೆಯೇ ಸದಾ ಕೋಪಗೊಂಡು ಉದ್ರೇಕಗೊಳ್ಳುವ ಹಾವು ಶಾಂತವಾಗಿ ಹಸುವಿನ ಮೇಲೆ ದಾಳಿ ಮಾಡದೆ ಶಾಂತವಾಗಿ ವರ್ತಿಸಿದೆ. ಈ ದೃಶ್ಯ ನೋಡಿ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಹಲವರು ಈ ವಿಡಿಯೋವನ್ನು ತಾಯಿ ಮಗುವಿನ ಸಂಬಂಧಕ್ಕೆ ಹೋಲಿಸಿದ್ದಾರೆ.

See also  ಪೈಚಾರ್ ಬಳಿ ಆಟೋಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ ಚಾಲಕ..! ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಸ್ಥಳೀಯರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget