ರಾಜ್ಯವೈರಲ್ ನ್ಯೂಸ್

ಪೊಲೀಸ್‌ ಇಲಾಖೆಯ 2,400 KSRP ಕಾನ್ ಸ್ಟೇಬಲ್ ಗಳ ನೇಮಕಕ್ಕೆ ಸರ್ಕಾರ ಆದೇಶ, ತುರ್ತು ಸಂದರ್ಭಗಳನ್ನು ನಿಭಾಯಿಸಲು ಬೆಟಾಲಿಯನ್ ಗಳ ತಯಾರಿಗೆ ಸಿದ್ಧತೆ

224

ನ್ಯೂಸ್ ನಾಟೌಟ್: ಕರ್ನಾಟಕ ಸರ್ಕಾರವು ಎಸ್‌.ಎಸ್‌.ಎಲ್‌.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದ ರಾಜ್ಯದ ನಿರುದ್ಯೋಗಿ ಹಾಗೂ ಪೊಲೀಸ್‌ ಇಲಾಖೆ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗವಕಾಶ ನೀಡಲು ಚಿಂತನೆ ನಡೆಸಿದೆ. ಬರೋಬರಿ 2400 KSRP ಕಾನ್ ಸ್ಟೇಬಲ್ ಹುದ್ದೆಗಳ ನೇಮಕಕ್ಕೆ ಪೊಲೀಸ್‌ ಇಲಾಖೆಗೆ ಆದೇಶ ನೀಡಿದೆ.

ಪೊಲೀಸ್‌ ಇಲಾಖೆಯ ಸಶಸ್ತ್ರ ಮೀಸಲು ಪಡೆಯಲ್ಲಿ 2 ಹೊಸ ಬೆಟಾಲಿಯನ್ ಪ್ರಾರಂಭಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿದೆ, ದೇವನಹಳ್ಳಿ ಬಳಿ 100 ಎಕರೆ, ಕೆಜಿಎಫ್ ಬಳಿ 50 ಎಕರೆ ಸ್ಥಳವನ್ನು ಸಹ ಗುರುತಿಸಿ ಮೀಸಲಿಡಲಾಗಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸಶಸ್ತ್ರ ಮೀಸಲು ಪಡೆ (ಕೆಎಸ್ ಆರ್ ಪಿ)ಯಲ್ಲಿ ಹೊಸದಾಗಿ 2400 ಪೊಲೀಸ್‌ ಸಿಬ್ಬಂದಿಗಳ 2 ಬೆಟಾಲಿಯನ್‌ಗಳ ಆರಂಭಕ್ಕೆ ಅಧಿಕೃತವಾಗಿ ಸರ್ಕಾರ ಆದೇಶಿಸಿದೆ. ಕೆಎಸ್ಆ‌ಪಿ ಪಡೆಯಲ್ಲಿ ಇಂಡಿಯನ್ ಬೆಟಾಲಿಯನ್‌ಗಳನ್ನು (ಐಆರ್‌ಬಿ) ಪ್ರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಕೆಎಸ್‌ಆರ್‌ಪಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್‌ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರವು ಗ್ರೀನ್‌ ಸಿಗ್ನಲ್ ನೀಡಿದೆ. ಪ್ರಸ್ತುತ 12 ಕೆಎಸ್‌ಆರ್‌ಪಿ ಹಾಗೂ 2 ಐಆರ್‌ಬಿ ಬೆಟಾಲಿಯನ್‌ಗಳಿವೆ. ಆದರೆ ರಾಜ್ಯದಲ್ಲಿ ಭದ್ರತೆ ಹಾಗೂ ಪ್ರಾಕೃತಿಕ ವಿಪತ್ತು ಸೇರಿದಂತೆ ತುರ್ತು ಸಂದರ್ಭಗಳನ್ನು ನಿಭಾಯಿಸಲು ಮತ್ತಷ್ಟು ಬೆಟಾಲಿಯನ್ ಗಳ ಅಗತ್ಯತೆ ಇದೆ ಎನ್ನಲಾಗಿದೆ.

ತಲಾ ಬೆಟಾಲಿಯನ್‌ನಲ್ಲಿ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ ಒಟ್ಟು 2400 ಪೊಲೀಸರ ನೇಮಕಾತಿಗೆ ಸಹ ಸರ್ಕಾರವು ಒಪ್ಪಿಗೆ ಸೂಚಿಸಿದೆ. ಈ ಆದೇಶ ಹಿನ್ನೆಲೆಯಲ್ಲಿ ಹೊಸ ಬೆಟಾಲಿಯನ್‌ಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಇಲಾಖೆ ಶುರುಮಾಡಲಿದ್ದು, ಸರ್ಕಾರಿ ಸೇವೆ ಸೇರಲು ಕನಸು ಕಂಡಿರುವ ಉದ್ಯೋಗಾಕಾಂಕ್ಷಿಗಳು ಬೇಕಾದ ಸಿದ್ಧತೆ ಮಾಡಿಕೊಳ್ಳಬಹುದು ಎಂದಿದೆ.
ಪ್ರಸ್ತುತ ಸರ್ಕಾರ ನೇಮಕಕ್ಕೆ ಆದೇಶ ನೀಡಿದ್ದು, ಈ ಹುದ್ದೆಗಳ ನೇಮಕಾತಿಗೆ ಸೂಕ್ತ ತಯಾರಿಯ ಬಳಿಕ ಪೊಲೀಸ್ ಇಲಾಖೆ ಸೂಚನೆ ನೀಡುವುದು ಬಾಕಿ ಇದೆ.

Click here to follow us on Facebook

Click

https://newsnotout.com/2024/12/mangaluru-udupi-pengal-cyclon-road-hd/
https://newsnotout.com/2024/12/mangaluru-real-stra-uppendra-temple-run-ui-cinema-d/
https://newsnotout.com/2024/12/tamilnadu-cyclon-forest-minister-visit-viral-news-d/
https://newsnotout.com/2024/12/kaadaba-man-suspence-case-revealed-viral-news-police/
https://newsnotout.com/2024/12/karimani-kannada-news-atm-theft-viral-news-krishna/
See also  ನಿಮ್ಮ ಆಧಾರ್​ ಸಂಖ್ಯೆಯಲ್ಲಿ ಎಷ್ಟು ಸಿಮ್​ ಕಾರ್ಡ್​ ಬಳಕೆಯಲ್ಲಿದೆ ಗೊತ್ತಾ..? ಪತ್ತೆಹಚ್ಚುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget