ಕ್ರೈಂರಾಜಕೀಯರಾಜ್ಯವೈರಲ್ ನ್ಯೂಸ್

ಮದ್ಯದ ಪ್ಯಾಕೆಟ್ ಮೇಲೆ ಕಾಂಗ್ರೆಸ್‌ ಅಭ್ಯರ್ಥಿಯ ಫೋಟೋ..! ಏನಿದು ವೈರಲ್‌ ಪೋಸ್ಟ್..?

ನ್ಯೂಸ್ ನಾಟೌಟ್: ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಾಳೆ(ಎ.26) ರಂದು ನಡೆಯಲಿದೆ. ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಲೇಬಲ್ ಅಂಟಿಸಿರುವ ಮದ್ಯದ ಪೌಚುಗಳ ಹಂಚಿಕೆ ಮಾಡಲಾಗಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

ಸುನೀಲ್ ಬೋಸ್, ಕ್ರಮ ಸಂಖ್ಯೆ 3 ಎಂಬ ಲೇಬಲ್ ಇರುವ ಮದ್ಯದ ಪೌಚುಗಳನ್ನು ಹಂಚಿಕೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ ಈ ಘಟನೆ ನಡೆದ ಸ್ಥಳದ ಬಗ್ಗೆ ನಿಖರತೆ ಇಲ್ಲ ಮತ್ತು ಹಂಚಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಮತದಾನದ ಹಿನ್ನೆಲೆಯಲ್ಲಿ ಏ.24 ರಿಂದ ಏ.26 ರ ಮಧ್ಯರಾತ್ರಿವರೆಗೆ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಕಮಿಷನರ್‌ ಆದೇಶ ಹೊರಡಿಸಿದ್ದಾರೆ.

ಹೀಗಾಗಿ, ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ. ರಾಜಕೀಯ ಗುಂಪುಗಳು ಸೇರುವಂತಿಲ್ಲ. ಅಲ್ಲದೆ, ಶುಕ್ರವಾರ(ಎ.25 ದಿಂದ ಮತದಾನ ಮುಕ್ತಾಯವಾಗುವ ತನಕ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರುವಂತಿಲ್ಲ. ಪೊಲೀಸರ ಕಣ್ತಪ್ಪಿಸಿ ಮದ್ಯ ಮಾರಾಟ ಮಾಡುವವರ ವಿರುದ್ಧ ಹೆಚ್ಚಿನ ನಿಗಾ ಇಡಲಾಗಿದೆ.

Related posts

70 ವರ್ಷದ ಅಂಧ ಮಹಿಳೆ ಮೇಲೆ ಅತ್ಯಾಚಾರ! ಇಲ್ಲಿದೆ ಆ ಭೂ ಮಾಲಿಕನ ಅಮಾನವೀಯ ಕೃತ್ಯದ ವಿವರ!

ಶೌಚಾಲಯಕ್ಕೆ ತೆರಳಿದ್ದ ಮಹಿಳೆಯ ಚಿನ್ನದ ಸರ ಎಳೆದು ಕಳ್ಳ ಪರಾರಿ

ಅರುಣ್‌ ಪುತ್ತಿಲಗೆ ಲೋಕಸಭಾ ಚುನಾವಣೆ ಟಿಕೆಟ್‌ ತಪ್ಪಿಸುವುದಕ್ಕೆ ಕಾಣದ ಕೈಗಳ ಪ್ರಯತ್ನ..? ಹಾಗಾದ್ರೆ ನಳಿನ್ ಬದಲಿಗೆ ಬಿಜೆಪಿಯಿಂದ ಯಾರ ಹೆಸರು ಸ್ಪರ್ಧಾ ಕಣದಲ್ಲಿದೆ?