ಕ್ರೈಂರಾಜ್ಯವೈರಲ್ ನ್ಯೂಸ್

ಚಿಲ್ಲರೆಗಾಗಿ ಮಹಿಳಾ ಬಸ್ ಕಂಡಕ್ಟರ್‌ ಮೇಲೆ ಹಲ್ಲೆ..! ಏನಿದು ಘಟನೆ..?

ನ್ಯೂಸ್ ನಾಟೌಟ್: ಚಿಲ್ಲರೆ ಹಣಕ್ಕಾಗಿ ಕರ್ತವ್ಯ ನಿರತ ಮಹಿಳಾ ನಿರ್ವಾಹಕಿ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಇಂದು(ಮಂಗಳವಾರ ಎ.30) ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ನಗರದ 2ನೇ ಘಟಕದಲ್ಲಿ ನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶೋಭಾ ಗಾಣಗಿ ಎಂಬುವರು ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.

ಬೆಳಗಾವಿ ಹಾಗೂ ಹೊನಗಾ ನಡುವೆ ಸಂಚರಿಸುವ ನಗರ ಸಾರಿಗೆ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಯಮನಾಪೂರ ಗ್ರಾಮದಿಂದ ಬಸನಲ್ಲಿ ಸಂಚರಿಸುತ್ತಿದ್ದ ಯುವಕ ಮಹಿಳಾ ನಿರ್ವಾಹಕಿಯೊಂದಿಗೆ ಬಸ್‌ನಲ್ಲಿ ಚಿಲ್ಲರೆ ಕೊಡುವ ವಿಚಾರದಲ್ಲಿ ಯುವಕ ಗಲಾಟೆ ನಡೆಸಿದ್ದಾನೆ. ಅಲ್ಲದೇ ಯುವಕ ಅವ್ಯಾಚ್ಛ ಶಬ್ಧಗಳಿಂದ ನಿಂದಿಸುವಾಗ ಯಾರಿಗೆ ಬೈಯುತ್ತಿರುವೆ ಎಂದು ಜೋರು ಮಾಡಿ ಕಂಡಕ್ಟರ್ ಕೇಳಿದ್ದಾರೆ ಅಷ್ಟಕ್ಕೇ ಯುವಕ ಲೇಡಿ ಕಂಡಕ್ಟರ್ ಗೆ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ನಿರ್ವಾಹಕಿಗೆ ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ವರದಿ ತಿಳಿಸಿದೆ.

Related posts

ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ವಿರುದ್ಧ ಎಫ್​ಐಆರ್..! ಇಲ್ಲಿದೆ ಸಂಪೂರ್ಣ ಮಾಹಿತಿ

ವಾಕಿಂಗ್ ಹೋಗುತ್ತಿದ್ದ ರಾಜಕೀಯ ನಾಯಕನ ಮೇಲೆ ಗುಂಡಿನ ಸುರಿಮಳೆ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

“ನಾನು ಅಲ್ಲಾನಲ್ಲಿ ಮಾತ್ರ ನಂಬಿಕೆ ಇಟ್ಟವನು ವಂದೇ ಮಾತರಂ ಹೇಳುವುದಿಲ್ಲ!” ಶಾಸಕನ ಹೇಳಿಕೆಗೆ ಎಲ್ಲೆಡೆ ಆಕ್ರೋಶ! ಯಾರು ಈ ಶಾಸಕ?