ಕ್ರೈಂವೈರಲ್ ನ್ಯೂಸ್ಸಿನಿಮಾ

ಗುಂಡು ಹಾರಿಸಿ ಸಿನಿಮಾ ನಿರ್ದೇಶಕನನ್ನು ಬೆದರಿಸಿದ ಸೀರಿಯಲ್ ನಟ..! ನಟ ಅರೆಸ್ಟ್, ಬಂದೂಕು ವಶಕ್ಕೆ..!

254

ನ್ಯೂಸ್‌ ನಾಟೌಟ್‌: ‘ಮುಗಿಲ್ ಪೇಟೆ’ಸಿನಿಮಾ ನಿರ್ದೇಶನ ಮಾಡಿದ್ದ ಭರತ್ ಮೇಲೆ ಕಿರುತೆರೆ ಸೀರಿಯಲ್ ಮತ್ತು ಸಿನಿಮಾದಲ್ಲಿ ನಟಿಸಿದ್ದ ನಟ ತಾಂಡವ್ ರಾಮ್ ಎಂಬವರು ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ಚಂದ್ರಾ ಲೇಔಟ್ ​ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಪೊಲೀಸರು ಬಂದಿಸಿದ್ದಾರೆ. ತಾಂಡವ್ ರಾಮ್ ಕೆಲ ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಿರ್ದೇಶನ ಮಾಡುತ್ತಿದ್ದ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣ ಸಿಟ್ಟಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಭರತ್, ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ತಾಂಡವ್ ರಾಮ್ ನಟಿಸುತ್ತಿದ್ದರು. ಆದರೆ ಆ ಸಿನಿಮಾವನ್ನು ಭರತ್ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ತಾಂಡವ್ ರಾಮ್, ನಿರ್ದೇಶಕ ಭರತ್ ​ಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಒಂದು ಸುತ್ತು ಗುಂಡು ಹಾರಿಸಿ ಕೊಲ್ಲುವ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಭರತ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಬಂಧಿಸಲಾಗಿದೆ.

‘ಮುಗಿಲ್ ಪೇಟೆ’ ಸಿನಿಮಾವನ್ನು ಭರತ್ ನಿರ್ದೇಶನ ಮಾಡಿದ್ದರು. ಇನ್ನು ತಾಂಡವ್ ರಾಮ್, ‘ಜೋಡಿಹಕ್ಕಿ’, ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಎಂ ಚೈತನ್ಯ ಅವರ ‘ಅಬ್ಬಬ್ಬ’ ಸಿನಿಮಾದಲ್ಲಿಯೂ ತಾಂಡವ್ ನಟಿಸಿದ್ದರು. ಇದೀಗ ತಾಂಡವ್ ರಾಮ್ ಅನ್ನು ಕೊಲೆ ಯತ್ನ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪರವಾನಗಿ ಹೊಂದಿದ್ದ ಅವರ ಬಂದೂಕನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Click

https://newsnotout.com/2024/11/tirupati-tirumala-hindu-temple-kannada-news-1000-above-workers-other-relegious/
https://newsnotout.com/2024/11/75-year-old-lady-r-by-begging-man-kannada-news-d-viral-news-d/
https://newsnotout.com/2024/11/elon-musk-kannada-news-space-x-kannada-news-isro-issue-d/
https://newsnotout.com/2024/11/kannada-news-geethanjali-keerthi-suresh-kananda-news-d-d/
See also  ಗಣಪತಿ ವಿಸರ್ಜನೆ ಆಟವಾಡುತ್ತಿದ್ದ ಮಗುವಿನ ದುರಂತ ಅಂತ್ಯ! 3 ವರ್ಷದ ಮಗು ಬಾವಿಗೆ ಬಿದ್ದದ್ದು ಹೇಗೆ? ಏನಿದು ದೇವರ ಆಟ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget