ನ್ಯೂಸ್ ನಾಟೌಟ್ : ಅಪ್ರಾಪ್ತ ವಯಸ್ಸಿನ ಮಕ್ಕಳು ಅರ್ಚಕನ ಬೈಕ್ ಸುಟ್ಟು ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಇಂದು(ಮಾ.2) ನಡೆದಿದೆ.
ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಗೆ ಮಕ್ಕಳ ಗುಂಪು ಬೆಂಕಿ ಹಚ್ಚಿದೆ. ಕುಡಚಿ ಪಟ್ಟಣದ ವಾರ್ಡ್ ನಂಬರ್ 2 ಮರಾಠಾ ಗಲ್ಲಿಯಲ್ಲಿ ಶನಿವಾರ ರಾತ್ರಿ ಪಟ್ಟಣದ ಅರ್ಚಕ ಪ್ರವೀಣ್ ಕುಲಕರ್ಣಿ ಎಂಬುವವರಿಗೆ ಸೇರಿದ ಬೈಕಗೆ ಬೆಂಕಿ ಹಚ್ಚಲಾಗಿದೆ.
ಮಕ್ಕಳ ವಿಕೃತಿ ಮೆರೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕುಡಚಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.